ಮೂಡುಬಿದಿರೆ: ಚಿಕ್ಕಮಗಳೂರು ಜಿಲ್ಲಾ ಬಾಲ್‍ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಬುಕ್ಕರಾಯ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಅಜ್ಜಂಪುರದ ಬುಕ್ಕಾಂಬುದಿಯಲ್ಲಿ ನಡೆದ ಕರ್ನಾಟಕ ರಾಜ್ಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಲೀಗ್ ಚಾಂಪಿಯನ್‍ಶಿಪ್‍ನ ಪುರುಷರ ಹಾಗೂ ಮಹಿಳೆಯರ ಎರಡೂ ವಿಭಾಗದ ಪ್ರಶಸ್ತಿಯನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ತಂಡಗಳು ಪಡೆದಿವೆ.

WhatsApp Image 2021-03-23 at 12.42.31 PMಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ನಡೆದ ಪಂದ್ಯಾವಳಿಯ ಪುರುಷರ ವಿಭಾಗದ ಫೈನಲ್ಸ್‍ನಲ್ಲಿ ಮೂಡುಬಿದಿರೆ ಆಳ್ವಾಸ್ ಪುರುಷರ ತಂಡ ಬೆಂಗಳೂರಿನ ಸ್ಕಲ್ವಿ ಅಸ್ತ್ರ ತಂಡವನ್ನು 35-19 ಹಾಗೂ 35-28 ನೇರ ಸೆಟ್‍ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಸ್ಕಲ್ವಿ ಅಸ್ತ್ರ ದ್ವಿತೀಯ ಸ್ಥಾನ, ಹಾಸನಾಂಬ ತೃತೀಯ ಸ್ಥಾನ ಹಾಗೂ ಸಹ್ಯಾದ್ರಿ ಬೆಂಗಳೂರು ತಂಡ ಚತುರ್ಥ ಸ್ಥಾನಗಳನ್ನು ಪಡೆದುಕೊಂಡಿತು.
ಮಹಿಳೆಯರ ವಿಭಾಗದ ಫೈನಲ್ಸ್‍ನಲ್ಲಿ ಆಳ್ವಾಸ್ `ಎ’ ತಂಡ ಆಳ್ವಾಸ್ `ಬಿ’ ತಂಡವನ್ನು 35-31 ಹಾಗೂ 35-18 ನೇರ ಸೆಟ್‍ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಆಳ್ವಾಸ್ `ಬಿ’ ತಂಡ ದ್ವಿತೀಯ ಸ್ಥಾನ, ಮಂಗಳೂರು ಜಿಲ್ಲಾ ತಂಡ ತೃತೀಯ ಹಾಗೂ ರಾಜೇಶ್ವರಿ ಬೆಂಗಳೂರು ತಂಡ ಚತುರ್ಥ ಸ್ಥಾನಗಳನ್ನು ಪಡೆದುಕೊಂಡಿತು.

By suddi9

Leave a Reply

Your email address will not be published. Required fields are marked *