ಬಂಟ್ವಾಳ: ಕುರಿಯಾಳ ಕಾಂಬೋಡಿ ಶ್ರೀ ಉಗ್ಗೆದಲ್ತಾಯ ದೈವದ ವರ್ಷಾವಧಿ ದೊಂಪದ ಬಳಿ ಉತ್ಸವ ಕೂರಿಯಾಳ ಕಾಂಬೋಡಿ ಶ್ರೀ ಉಗ್ಗೆದಲ್ತಾಯ ದೈವದ ವರ್ಷಾವಧಿ ನೇಮೊತ್ಸವವು ಸೋಮವಾರ ರಾತ್ರಿ ನೋರ್ನಡ್ಕದಲ್ಲಿ ನಡೆಯಿತು. ಸಂಜೆ 6 ಗಂಟೆ ಗೆ ಕಾಂಬೋಡಿ ಬಂಡಾರ ಮನೆಯಿಂದ ಬಂಡಾರ ಆಗಮನ ನತರ ಪೊಳಲಿ ಅಖಿಲೇಶ್ವರ ಭಜನಾ ಮಂಡಳಿ ಯವರಿಂದ ಭಜನೆ ಕಾರ್ಯಕ್ರಮ ನಡಯಿತು .
ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆದು ರಾತ್ರಿ 11 ಗಂಟೆಗೆ ದೈವದ ನೇಮೋತ್ಸವ ನಡಯಿತು . ದೈವದ ಯಜಮಾನ ರಾದ ಕಾಂಬೋಡಿ ದಿನಕರ ಆಳ್ವ ಮುಂಡಡ್ಕ ಗುತ್ತು ಯಜಮಾನ ರಾದ ರತ್ನಾಕರ ಶೆಟ್ಟಿ ಹಾಗೂ ಮಾಯಿಲ್ ಕೊಡಿ ಗುತ್ತು ಪಡು ಗುತ್ತು ಹಾಗೂ ಮೂವ ಮನೆ ಯವರು ಇದ್ದು ಎಲ್ಲರಿಗು ದೈವ ದ ಪ್ರಸಾದ ವಿತರಣೆ ಮಾಡಲಾಯಿತು.
