ಮಂಗಳೂರು: ಆಯುರ್ವೇದ ದ ವೈದ್ಯ ಬೆಳ್ಳಿಪ್ಪಾಡಿ ರತನ್ ರೈ (66) ಅವರು ಅಲ್ಪಕಾಲದ ಅಸೌಖ್ಯದಿಂದ ಕದ್ರಿ ನಂತೂರು ಸ್ಟಾರ್ ಲೆಗಸಿ ಅಪಾರ್ಟ್ ಮೆಂಟ್ ನಲ್ಲಿ  ಶುಕ್ರವಾರ ಸಂಜೆ ನಿಧನರಾದರು.
ಡಾ. ಬಿ. ಆರ್. ರೈ ಎಂದೇ ಖ್ಯಾತರಾಗಿದ್ದ ಇವರು ತನ್ನ ಸರಳ, ಸಜ್ಜನಿಕೆಯ ವ್ಯಕ್ತಿತ್ವದಿಂದ ಜನಾನುರಾಗಿಯಾಗಿದ್ದರು.
rathan
ಆಯುರ್ವೇದ ವೈದ್ಯರುಗಳ ಸಂಘಟಿತರಾಗುವ ದಿಸೆಯಲ್ಲಿಯೂ ಶ್ರಮಿಸಿದ್ದರು. ಹಿಂದೆ ವೆಲೆನ್ಸಿಯಾ ಸಮೀಪ ಶಕ್ತಿ ಆಯುರ್ವೇದ ಚಿಕಿತ್ಸಾಲಯವನ್ನು ಹೊಂದಿದ್ದರು. ಮೃತದೇಹದ ಅಂತ್ಯಕ್ರಿಯೆ ಶನಿವಾರ ನೆರವೇರಿತು.
ಇವರು ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ.

By Suddi9

Leave a Reply

Your email address will not be published. Required fields are marked *