ಗುರುಪುರ : ಗಂಜಿಮಠ ಮರಾಠಿ ಸಮಾಜ ಸೇವಾ ಸಂಘದ ಮಹಾಸಭೆ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ 10 ಮಂದಿ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರದೊಂದಿಗೆ ಅಭಿನಂದನೆ, ನಿವೃತ್ತರಿಗೆ ಮತ್ತು ವಿಶೇಷ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಗಂಜಿಮಠದಲ್ಲಿರುವ ಮರಾಠಿ ಸಮಾಜ ಭವನದಲ್ಲಿ ನಡೆಯಿತು.


ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಕೇಶವ ನಾಯ್ಕ್ ಗಂಜಿಮಠ ಅವರಿಗೆ `ಸೇನಾ ರತ್ನ’, ಯುನೈಟೆಡ್ ವಿಮೆ ಕಂಪೆನಿಯ ನಿವೃತ್ತ ಅಧಿಕಾರಿ ಪದ್ಮನಾಭ ವಿ ನಾಯ್ಕ್ ಅವರಿಗೆ `ಸೇವಾ ರತ್ನ’ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ದಕ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಮತ್ತು ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ಗಳಿಸಿರುವ ಯೋಗ ಮತ್ತು ದೈಹಿಕ ಶಿಕ್ಷಕ ಶೇಖರ ಕಡ್ತಲರಿಗೆ `ಸಮಾಜ ರತ್ನ’ ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು.
ಒಡ್ಡೂರು ದಿ. ಪುತ್ತು ನಾಯ್ಕ್ ಸ್ಮರಣಾರ್ಥ ಪದ್ಮನಾಭ ನಾಯ್ಕ್ ಪ್ರತಿವರ್ಷ ನೀಡುತ್ತಿರುವ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ನೀಡಿ ಅಭಿನಂದಿಸಲಾಯಿತು.
ಸಂಘದ 2021-23ನೇ ಸಾಲಿಗೆ ಅಧ್ಯಕ್ಷರಾಗಿ ಶೇಖರ ಕಡ್ತಲ, ಅಶೋಕ್ ನಾಯ್ಕ್ ಮುಚ್ಚೂರು(ಕಾರ್ಯದರ್ಶಿ), ಸುಶೀಲಾ ಎಸ್(ಕೋಶಾಧಿಕಾರಿ) ಹಾಗೂ ಇತರ ಪದಾಧಿಕಾರಿಗಳು ಆಯ್ಕೆ ನಡೆಯಿತು. ಸಂಘದ ಅಧ್ಯಕ್ಷ ಪದ್ಮನಾಭ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.
ಹೊಸದಾಗಿ ರಚಿಸಲಾದ ಸಂಘದ ಮಹಿಳಾ ಘಟಕದ ಅಧ್ಯಕ್ಷರಾಗಿ ಸವಿತಾ ನಾಯ್ಕ್ ಒಡ್ಡೂರು ಮತ್ತು ಭವ್ಯಾ ಮುಚ್ಚೂರು(ಕಾರ್ಯದರ್ಶಿ) ಆಯ್ಕೆಯಾದರು. ಕಾರ್ಯದರ್ಶಿ ಅಶೋಕ್ ನಾಯ್ಕ್ ವರದಿ ವಾಚಿಸಿದರು. ಉಪಾಧ್ಯಕ್ಷ ಶೇಖರ ಕಡ್ತಲ, ರಾಜೀವಿ ನಾಯ್ಕ್, ಗುಣಪಾಲ ನಾೈಕ್, ಸತೀಶ್ ನಾೈಕ್, ಕೇಶವ ನಾಯ್ಕ್, ಪದ್ಮನಾಭ ನಾೈಕ್, ಪುರಂದರ ನಾಯ್ಕ್ ಉಪಸ್ಥಿತರಿದ್ದರು. ಕು. ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರೆ, ಹರಿಶ್ಚಂದ್ರ ನಾೈಕ್ ವಂದಿಸಿದರು.
