ಮೂಡುಬಿದಿರೆಯ ಜ್ಯೋತಿನಗರದಲ್ಲಿರುವ ಶ್ರೀ ಧರ್ಮಶಾಸ್ತ್ರ ಮಂದಿರದಲ್ಲಿ ಜನವರಿ 14ರಂದು ಬೆಳಿಗ್ಗೆ 7.30ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಗೆ ನೂತನ 18 ಮೆಟ್ಟಿಲು ಹಾಗೂ ಪಂಚಲೋಹ್ ಹೊದಿಕೆಯ ಪ್ರತಿಷ್ಠಾಪನೆ ನಡೆಯಲಿದೆ.

ಮದ್ಯಾಹ್ನ ಮಹಾಪೂಜೆಯ ನಂತರ ಅನ್ನಸಂತರ್ಪಣೆಯಿದೆ. ಸಾಯಂಕಾಲ 5.30ಕ್ಕೆ ಭಜನಾ ಕಾರ್ಯಕ್ರಮ ನಡೆಯಲಿದೆ. ಸಾಯಂಕಾಲ 6.30ಕ್ಕೆ ಅಯ್ಯಪ್ಪ ಮಕರ ಸಂಕ್ರಮಣ ಪೂಜೆ ನಡೆಯಲಿದೆ ಎಂದು ಶ್ರೀ ಧರ್ಮಶಾಸ್ತ ಸನ್ನಿಧಿಯ ಅಧ್ಯಕ್ಷರು ತಿಳಿಸಿದ್ದಾರೆ.
