ಮೂಡಬಿದಿರೆ ವಲಯದ ಒಂಟಿಕಟ್ಟೆಯಲ್ಲಿ ಶ್ರೀ ಸಿಂಚನ ಸೌಹಾರ್ದ ಸಹಕಾರಿಯ ನೂತನ ಏಕದಂತ ಸಿಂಚನ ಸ್ವ ಸಹಾಯ ಸಂಘವನ್ನು ಉದ್ಘಾಟಿಸಲಾಯಿತು.

ಸಂಸ್ಥೆಯ ಸದಸ್ಯ ಗಣೇಶ್ ದೇವಾಡಿಗ ದೀಪ ಬೆಳಗಿಸಿ ನೂತನ ಸ್ವಸಹಾಯ ಸಂಘವನ್ನು ಉದ್ಘಾಟನೆ ಮಾಡಿದರು.
ಮೇಲ್ವಿಚಾರಕರಾದ ಕುಮುದಾಕ್ಷ ಕೋಟ್ಯಾನ್ ಮಾಹಿತಿ ಸ್ವಸಹಾಯ ಸಂಘದ ಕುರಿತು ಮಾಹಿತಿ ನೀಡಿದರು.
ಇದೇ ಸಮದರ್ಭದಲ್ಲಿ ಸಂಘದ ಅಧ್ಯಕ್ಷರಾಗಿ ಶಶಿಕಲಾ ಹಾಗೂ ಕಾರ್ಯದರ್ಶಿಯಾಗಿ ವಿದ್ಯಾ ಅವರನ್ನು ಆಯ್ಕೆ ಮಾಡಲಾಯಿತು.
