ಪೊಳಲಿ: ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಮಣಿಕಂಠಪುರದಲ್ಲಿ 15ನೇ ವರ್ಷದ ಭಜನಾ ಸಂಕೀರ್ತನೆ ಮತ್ತು ಅಯ್ಯಪ್ಪ ಸ್ವಾಮಿಯ ಮಹಾಪೂಜೆಯು ಜ.3ರಂದು ಭಾನುವಾರ ನಡೆಯಲಿದೆ. ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರ ಆರ್ಶೀವಚನದೊಂದಿಗೆ ಶ್ರೀ ಮಣಿಕಂಠ ಭಜನಾ ಮಂದಿರದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆಯು ನಡೆಯಲಿದೆ.
ಕಾರ್ಯಕ್ರಮಗಳು:
ಜನವರಿ 2ರಂದು ಶನಿವಾರ ಬೆಳಗ್ಗೆ 10 ಗಂಟೆಗೆ ಪೊಳಲಿ ಅನಂತ ಭಟ್ ಇವರಿಂದ ಗಣಹೋಮ ನಡೆಯಲಿದೆ. ಜನವರಿ 3ರಂದು ಭಾನುವಾರ ಬೆಳಗ್ಗೆ 6.ಗಂಟೆಗೆ ಭಜನಾ ಸಂಕೀರ್ತನಕ್ಕೆ ಚಾಲನೆ. ಮಧ್ಯಾಹ್ನ 12 ಗಂಟೆಗೆ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪನೆ ರಾತ್ರಿ 12 ಗಂಟೆಗೆ ಮಂಗಳೋ ತ್ಸವ ನಡೆಯಲಿದೆ.ಎಂದು ಶ್ರೀ ಮಣಿಕಂಠ ಭಜನಾ ಮಂದಿರದ ಪ್ರಕಟನೆ ತಿಳಿಸಿದೆ.
