ಮೂಡುಬಿದಿರೆ : ಇಲ್ಲಿನ ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ನಡೆದ 70ನೇ ವರ್ಷದ ಅಹೋರಾತ್ರಿ ಏಕಾಹ ಭಜನೆ ಸಂದರ್ಭ ಶ್ರೀ ದೇವಳದ ವಠಾರದಲ್ಲಿ ಪ್ರತೀ ವರ್ಷವು ದೇವರ ವಿವಿಧ ರೂಪದ ರಂಗೋಲಿ ಬಿಡಿಸುವಂತೆ ಈ ವರ್ಷ ವೇದಮೂರ್ತಿ ಸುಧೇಶ್ ಭಟ್ ಅವರ ಕೈ ಚಳಕದಿಂದ ಮೂಡಿಬಂದ ದೇವರ ಹರಿಹರ ( ಶಂಕರನಾರಾಯಣ) ರೂಪವು ಬಂದಂತಹ ಜನರನ್ನು ವಿಶೇಷವಾಗಿ ಆಕರ್ಷಿಸಿತು.

