ಬಂಟ್ವಾಳ: ರಾ.ಸ್ವ.ಸೇ.ಸಂಘದ ಹಿರಿಯ ಪ್ರಮುಖ್ , ಬರಿಗಾಲಸಂತ ದಿವಂಗತ ಅಗ್ರಬೈಲ್ ವೆಂಕಟರಮಣ ಹೊಳ್ಳರು  ಆದರ್ಶ, ಸರ್ವಸಮರ್ಪಿತ ಜೀವನ ನಡೆಸಿ ಎಲೆಮರೆಕಾಯಿಯಂತೆ ಒರ್ವ ಸ್ವಯಂ ಸೇವಕತ್ವದ ಸೇವೆಯ ಶಬ್ದಕ್ಕೆ ಪ್ರತಿರೂಪದಂತಿದ್ದರು ಎಂದು ರಾ.ಸ್ವ.ಸೇವಕ ಸಂಘದ ವಿಭಾಗ ಸಂಪರ್ಕಪ್ರಮುಖ್ ರವೀಂದ್ರ ಪಿ.ನುಡಿದರು. ಬಿ.ಸಿ.ರೋಡಿನ ಸಂಘದ ಕಾರ್ಯಾಲಯದಲ್ಲಿ  ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತರಾದ ಅಗ್ರಬೈಲ್ ವೆಂಕಟರಮಣ  ಹೊಳ್ಳರಿಗೆ  ನಡೆದ ಶೃದ್ದಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿದರು.IMG_20201223_190526

ತಮ್ಮ ಜೀವನ ಪೂರ್ತಿ ಸಂಘದ ಕಾರ್ಯಕ್ಕೆ ಮೀಸಲಿಟ್ಟ ದಿ. ಹೊಳ್ಳರು ಸಾವಯವ ಕೃಷಿಯಲ್ಲಿ ಒರ್ವ ಅತ್ಯತ್ತಮ ಸಾಧಕರು ಆಗಿದ್ದರು ಎಂದು ಹೇಳಿದ ರವೀಂದ್ರ ಪಿ.ಅವರು ನಾವೆಲ್ಲರೂ ದಿ.ಹೊಳ್ಳರು ತೋರಿದ ದಾರಿಯಲ್ಲಿ ಸಾಗಿದಾಗ ಅದುವೇ ಅವರಿಗೆ ಸಲ್ಲಿಸುವ ನಿಜವಾದ ಶೃದ್ದಾಂಜಲಿ ಎಂದರು. ದಿವಂಗತ ವೆಂಕಟರಮಣ ಹೊಳ್ಳರ ಜೊತೆ ಕೆಲಸದಲ್ಲಿ ತೊಡಗಿಸಿ,ನಿಕಟ ಸಂಪರ್ಕ ಹೊಂದಿದ ಸಂಘದ ಪ್ರಮುಖರಾದ ಪದ್ಮನಾಭ ಪಿ.ಕೆ.,ಪರಮೇಶ್ವರ ಹೆಗ್ಗಡೆ,ಅಜೇಯ ಕೊಂಬ್ರಬೈಲ್ ,ಸಂಕಪ್ಪ ಶೆಟ್ಟಿ ಸಂಚಯಗಿರಿ, ಮೊದಲಾದವರು ಮಾತನಾಡಿ ಕಷ್ಟಕಾಲದಲ್ಲಿ ಬಂಟ್ವಾಳ ತಾ.ನಾದ್ಯಂತ ದಿ.ಹೊಳ್ಳರು ಬರಿಗಾಲಲ್ಲಿ ಓಡಾಡಿ ಸಂಘಕ್ಕೆ ಗಟ್ಟಿ ಅಡಿಪಾಯ ಹಾಕಿಕೊಟ್ಟಿರುವುದನ್ನು ಸ್ಮರಿಸಿ,ಗುಣಗಾನ ಮಾಡಿದರಲ್ಲದೆ ಅವರು ಮಾಡಿರುವ ಕೆಲಸವನ್ನು ಭವಿಷ್ಯದ ದಿನಗಳಲ್ಲಿ ಕೈಲಾದ ಮಟ್ಟಿಗೆ ಮುಂದುವರಿಸುವುದು ಅವಶ್ಯಕವಾಗಿದೆ ಎಂದರು.

ರಾ.ಸ್ವ.ಸೇ. ಸಂಘದ ಜಿಲ್ಲಾ ಕಾರ್ಯವಾಹ ವಿನೋದ್ ಕೊಡ್ಮಣ್,,ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಮೊದಲಾದವರು ಉಪಸ್ಥಿತರಿದ್ದರು.ವಿನಾಯಕ ಕಾರ್ಯಕ್ರಮ ನಿರ್ವಹಿಸಿದರು. ಬೆಳಗ್ಗೆ 5-45 ಕ್ಕೆ ಶೃದ್ದಾಂಜಲಿ ಸಭೆ ನಡೆದಿದ್ದು,ನೂರಾರು ಮಂದಿ ಸ್ವಯಂಸೇವಕರು ದಿ.ಹೊಳ್ಳರ ಭಾವಚಿತ್ರಕ್ಕೆ ಪುಪ್ಪಾರ್ಚನೆಗೈದು, ಮೌನ ಪ್ರಾರ್ಥನೆಯ ಮೂಲಕ ಶೃದ್ದಾಂಜಲಿ ಸಮರ್ಪಿಸಲಾಯಿತು

By suddi9

Leave a Reply

Your email address will not be published. Required fields are marked *