ಮೆಲ್ಕಾರ್ : ಎಸ್ ಎಸ್ ಇ ದ.ಕ ಜಿಲ್ಲಾ ಘಟಕದ ವತಿಯಿಂದ  ಮೆಲ್ಕಾರ್ ಪರಿಸರದ ಸಾರ್ವಜನಿಕರ ಅನುಕೂಲಕ್ಕಾಗಿ ಆಟೋ ರಿಕ್ಷಾ ಪಾಕ್೯ ಬಳಿ ಕುಡಿಯುವ ನೀರಿನ ಫ್ರೀಝರ್ ಘಟಕವನ್ನು ಲೋಕಾರ್ಪಣೆಗೊಳಿಸಲಾಯಿತು‌.POJ_7803
ಎಸ್ ಎಸ್ ಇ ನ ಬಂಟ್ವಾಳ ಅಧ್ಯಕ್ಷ ಸಿದ್ದೀಕ್ ಸಾದಿಯವರು ಘಟಕದ ಉದ್ಘಾಟನೆಯನ್ನು  ನೆರವೇರಿಸಿದರು.  ಪುರಸಭೆಯ ಉಪಾಧ್ಯಕ್ಷೆ ಜೆಸಿಂತಾ ಡಿಸೋಜಾ, ಪುರಸಭಾ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್,  ಸಚಿನ್ ಮೆಲ್ಕಾರ್,ಎಸ್ ಎಸ್ ಇ ನ  ದ.ಕ ಜಿಲ್ಲಾ ಕಾರ್ಯದರ್ಶಿ ರಶೀರಿ ಹಾಜಿ ವಗ್ಗ  , ಬಂಟ್ವಾಳ ಡಿವಿಷನ್ ನ ಪ್ರಧಾನ ಕಾರ್ಯದರ್ಶಿ ಮೌಸೂಫ್ ಅಬ್ದುಲ್ಲಾ,   ಜಿಲ್ಲಾಧ್ಯಕ್ಷರಾದ ಇಬ್ರಾಹಿಂ ಸಖಾಫಿ ಸೆರ್ಕಳ,   ದ.ಕ. ಜಿಲ್ಲಾ  ವೆಸ್ಟ್ ಝೋನ್‌ನ ಉಪಾಧ್ಯಕ್ಷರಾದ ಅಕ್ಬರ್ ಅಲಿ ಮದನಿ, ಸಿನಾನ್ ಸಖಾಫಿ, , ಆರ್. ಆರ್. ಕಮರ್ಷಿಯಲ್ ಸೆಂಟರ್‌ನ ಮಾಲಕ, ಫ್ರೀಝರ್ ಘಟಕಕ್ಕೆ ನೀರಿನ ಸೌಲಭ್ಯವನ್ನು  ಒದಗಿಸಿಕೊಟ್ಟ ರಾಮ್‌ರಾಜ್ ರಾವ್, ಎನ್.ವಿ. ಡಿಜಿಟಲ್ಸ್  ಮಾಲಕ ನವೀನ್ ಪ್ರಕಾಶ್, ಬಿ.ಜೆ.ಪಿ ಪ್ರಮುಖರಾದ  ರೂಪೇಶ್ ಆಚಾರ್ಯ, ಪ್ರಮುಖರಾದ ಅಲ್ತಾಫ್ ಕೊಳಕೆ, ಶಬೀರ್ ಬೇಂಕ್ಯ ಹಾಗೂ ಎಲ್ಲಾ ರಿಕ್ಷಾ ಚಾಲಕರು, ಮಾಲಕರು ಉಪಸ್ಥಿತರಿದ್ದರು. ರಿಕ್ಷಾ ಚಾಲಕ ಮಾಲಕರ ಸಂಘ ದ ಅಧ್ಯಕ್ಷ ಜಯಪ್ರಕಾಶ್‌ರವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *