ವಿಟ್ಲ: ಶ್ರೀ ರಾಮ ಮಂದಿರದಲ್ಲಿ ಜಿ ಎಸ್ ಬಿ ಸಮಾಜದ ವತಿಯಿಂದ ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ ವಿಟ್ಲ ಬೊಬ್ಬೆಕ್ಕೇರಿಯ ಪುಷ್ಪ ಹೆಲ್ತ್ ಸೆಂಟರಿನಲ್ಲಿ ಎಲ್ಲಾ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ| ವಿ ಕೆ ಹೆಗ್ಡೆಯವರನ್ನು ಗೌರವಿಸಲಾಯಿತು. ಸಂಘದ ಅಧ್ಯಕ್ಷರು ಇತರ ಪದಾಧಿಕಾರಿಗಳು ಹಿರಿಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸ್ವಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
