ಮೂಡುಬಿದಿರೆ: ಭಾರತ ದೇಶಕ್ಕೆ ಸೂಕ್ತ ದಾಖಲೆಗಳಿಲ್ಲದೆ ಅಕ್ರಮ ಪ್ರವೇಶ ಮಾಡಿರುವ ಬಾಂಗ್ಲಾ ದೇಶದ ಪ್ರಜೆಗೆ ಮೂಡುಬಿದಿರೆ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ನೀಡಿ, ಆದೇಶಿಸಿದೆ.
ಅಕ್ರಮ ವಲಸಿಗ, ಬಾಂಗ್ಲಾದೇಶದ ಪ್ರಜೆ ದುಲಾಲ್ ಬೈರಾಗಿ ಎಂಬತ ಮೂಡುಬಿದಿರೆ ತಾಲೂಕಿನ ಇರುವೈಲು ಪತ್ತೆಯಾಗಿದ್ದು, ಮೂಡುಬಿದಿರೆ ಪೊಲೀಸರು ಕಳೆದ ವರ್ಷ ಬಂಧಿಸಿ, ನ್ಯಾಯಾಲಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ವಿಚಾರಣೆ ಸಂದರ್ಭ ಆರೋಪಿ ಅಕ್ರಮ ವಲಸಿಗನೆಂಬುದು ಸಾಬೀತಾಗಿದೆ.
ಮೂಡುಬಿದಿರೆ ಜೆ.ಎಂ.ಎಫ್.ಸಿ ನ್ಯಾಯಾಲಯ ಅಪರಾಧಿಗೆ ಎರಡು ವರ್ಷಗಳ ಸಜೆ ವಿಧಿಸಿದೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಶೋಭಾ ಎಸ್. ಆರೋಪಿ ವಿರುದ್ಧ ವಾದಿಸಿದರು.
ಇಲ್ಲಿನ ಸಹಾಯಕ ಠಾಣಾಧಿಕಾರಿ ವಿನಾಯಕ ಬಾವಿಕಟ್ಟೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
