ಬಂಟ್ವಾಳ: ಅಖಿಲ ಭಾರತ ಅಧಿವಕ್ತಾ ಪರಿಷತ್ ಬಂಟ್ವಾಳ ಇದರ ವತಿಯಿಂದ ಸಂವಿಧಾನ ದಿನಾಚರಣೆ ಮತ್ತು ವಕೀಲರ ದಿನಾಚರಣೆಯು ಶುಕ್ರವಾರ ಸಂಜೆ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಂಗಳೂರಿನ ಹಿರಿಯ ವಕೀಲ ನಂದಕಿಶೋರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಇತ್ತೀಚಿಗಿನ ವರ್ಷಗಳಲ್ಲಿ ಸಂವಿಧಾನದಲ್ಲಿ ಸಾಕಷ್ಟು ತಿದ್ದುಪಡಿ ಮಾಡಲಾಗಿದ್ದು, ಪ್ರಮುಖವಾಗಿ ತ್ರಿವಳಿ ತಲಾಖ್, 370 ಅರ್ಟಿಕಲ್ ರದ್ದು ಮೊದಲಾದ ಮಹತ್ವದ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಕಳೆದ 70 ವರ್ಷಗಳ ಬಳಿಕ ಅಧಿಕಾರಕ್ಕೆ ಬಂದ ಕೇಂದ್ರ ಸರಕಾರ ರಾಜಕೀಯ ಇಚ್ಚಾಶಕ್ತಿ,ಧೈರ್ಯವನ್ನು ತೋರಿದೆ ಎಂದರು.
ಅತಿಥಿಯಾಗಿದ್ದ ಎಬಿಎಪಿಯ ದ.ಕ.ಜಿಲ್ಲಾ ಜತೆ ಕಾರ್ಯದರ್ಶಿ,ಬಿ.ಸಿ.ರೋಡಿನ ವಕೀಲ ಅರುಣ್ ರೋಶನ್ ಡಿಸೋಜ ಅವರು ಮಾತನಾಡಿ ಸಂವಿಧಾನ ಮತ್ತು ವಕೀಲರು ಒಂದೇ ನಾಣ್ಯದ ಎರಡು ಮುಖವಾಗಿದ್ದು, ರಾಷ್ಟ್ರೀಯ ಕಲ್ಪನೆಯೊಂದಿಗೆ ರಾಜಕೀಯ ರಹಿತವಾಗಿ ಅಸ್ತಿತ್ವಕ್ಕೆ ಬಂದಿರುವ ಎಬಿಎಪಿ ಶೋಷಿತ ವರ್ಗ,ಕಾನೂನ ವಂಚಿತರಿಗೆ ಕಾನೂನಿನ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು.
ಎಬಿಎಪಿ ಬಂಟ್ವಾಳ ಘಟಕದ ಗೌರವಾಧ್ಯಕ್ಷ ರಾಜಾರಾಮ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ರವೀಂದ್ರ ಕುಕ್ಕಾಜೆ,ಪ್ರಧಾನ ಕಾರ್ಯದರ್ಶಿ ವೀರೇಂದ್ರ ಎಂ.ಸಿದ್ದಕಟ್ಟೆ ಉಪಸ್ಥಿರಿದ್ದರು.ನ್ಯಾಯವಾದಿಗಳಾದ ಆಶಾ ಸ್ವಗತಿಸಿದರು. ಗುರುರಾಜ್ ಕಾರ್ಯ ಕ್ರಮ ನಿರೂಪಿಸಿದರು.
