ಬಂಟ್ವಾಳ : ಜಿಲ್ಲೆಯಲ್ಲೇ  ಇದೇ ಮೊದಲಿಗೆ  ಪಾಣೆಮಂಗಳೂರು ಶ್ರೀ ಭಯಂಕೇಶ್ವರ ಸದಾಶಿವ ರುದ್ರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಡಿ. ೧೪ರಂದು ಒಂದು ಲಕ್ಷ ಬಿಲ್ವಪತ್ರ ಅರ್ಚನೆ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಬಿ.ಜಿ.ಸೋಮಯಾಜಿ ತಿಳಿಸಿದರು.

ಬ್ರಹ್ಮಶ್ರೀ ಉಚ್ಚಿಲತ್ತಾಯ ನಿಲೇಶ್ವರ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ ಬೆಳಗ್ಗೆ ೮ ಗಂಟೆಗೆ ಪ್ರಾರ್ಥನೆ, ಮಹಾ ಸಂಕಲ್ಪದೊಂದಿಗೆ ರುದ್ರ ಪಾರಾಯಣ ಜಪ, ಶ್ರೀ ಮಹಾಗಣಪತಿ ಹವನ, ಲಕ್ಷ ಬಿಲ್ವಾರ್ಚನೆ, ಮಧ್ಯಾಹ್ನ ೧೨ ಗಂಟೆಗೆ ಕಲಶಾಭಿಷೇಕ, ೧೨. ೧೫ರಿಂದ ಮಹಿಳೆಯರಿಂದ ಕುಂಕುಮಾರ್ಚನೆ, ರಾತ್ರಿ ೭.೩೦ಕ್ಕೆ ಶ್ರೀ ರಂಗಪೂಜೆ ನಡೆಯುವುದು.

ಬಿಲ್ವಾರ್ಚನೆಯಲ್ಲಿ ಭಾಗವಹಿಸುವವರು ಬೆಳಗ್ಗೆ ೮ ಗಂಟೆಗೆ ಸರಿಯಾಗಿ ಮಡಿಉಟ್ಟು ಉಪಸ್ಥಿತರಿರುವುದು. ಕುಂಕುಮಾರ್ಚನೆಯಲ್ಲಿ ಭಾಗವಹಿಸುವವರು ಬೆಳಗ್ಗೆ ೧೧.೩೦ಕ್ಕೆ ಉಪಸ್ಥಿತರಿರುವುದು. ಭಕ್ತಾಧಿಗಳಿಂದ ಬಿಲ್ವಪತ್ರೆ, ಹಿಂಗಾರ, ತುಳಸಿ, ಕೇಪುಲ ಹೂ, ಸೀಯಾಳ ಮೊದಲಾದ ಸುವಸ್ತುಗಳನ್ನು ಕಾರ್ಯಕ್ರಮದ ಅಂಗವಾಗಿ ಸ್ವೀಕರಿಸಲಾಗುತ್ತದೆ. ಬೆಳಗ್ಗೆ ಉಪಹಾರ, ಮಧ್ಯಾಹ್ನ ಅನ್ನಸಂತರ್ಪಣೆ ವ್ಯವಸ್ಥೆ ಇರುವುದೆಂದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *