ಬಂಟ್ವಾಳ: ಮತದಾರ ಪಟ್ಟಿಯ ವೀಕ್ಷಕರಾದ ದ.ಕ.ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಪೊನ್ನುರಾಜ್ ಅವರು ಬಂಟ್ವಾಳ ತಾಲೂಕಿಗೆ ಶನಿವಾರ ಭೇಟಿ ನೀಡಿ ಬೂತ್ ಗಳಿಗೆ ತೆರಳಿ ಮಂಗಳೂರು ಕ್ಷೇತ್ರದ 204 ಮತಗಟ್ಟೆಗೆ ಭೇಟಿ ನೀಡಿ ಮತದಾರರ ಪಟ್ಟಿಯ ವೀಕ್ಷಣೆ ನಡೆಸಿದರು.
ತುಂಬೆ ಗ್ರಾಮದ ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.ಮತದಾನ ಪ್ರಕ್ರಿಯೆ ಕುರಿತು ಮಾಹಿತಿಯನ್ನು ಅವರು ನೀಡಿದರು. ಮಂಗಳೂರು ಮತ್ತು ಪುತ್ತೂರು ಸಹಾಯಕ ಕಮೀಷನರ್ ಗಳಾದ ಮದನ್ ಮೋಹನ್, ಯತೀಶ್ ಉಳ್ಳಾಲ್, ತಹಶೀಲ್ದಾರ್ ರಶ್ಮಿ ಎಸ್.ಆರ್, ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಚುನಾವಣೆ ಶಾಖೆಯ ಪ್ರಥಮ ದರ್ಜೆ ಸಹಾಯಕ ರಾಜ್ ಕುಮಾರ್. ತುಂಬೆ ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತ್, ಬೂತ್ ಮಟ್ಟದ ಅಧಿಕಾರಿಗಳಾದ ವಿಶಾಲಾಕ್ಷಿ ಹಾಗೂ ಮಲ್ಲಿಕಾ ಉಪಸ್ಥಿತರಿದ್ದರು.
