ಬಂಟ್ವಾಳ: ಸೊಸೈಟಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ ಯುವತಿಯೊರ್ವಳು ನಾಪತ್ತೆಯಾಗಿರುವ ಘಟನೆ ಕುಕ್ಕಿಪಾಡಿ ಗ್ರಾಮದ ಕೆಂತಾಳೆ ಎಂಬಲ್ಲಿಂದ ವರದಿಯಾಗಿದೆ.ಇಲ್ಲಿನ ದಿ. ಬಾಬು ಪೂಜಾರಿ ಅವರ ಪುತ್ರಿ ಪವಿತ್ರ(೨೪) ನಾಪತ್ತೆಯಾಗಿದ್ದಾಳೆ.

IMG-20201204-WA0061

ಪವಿತ್ರ ಬೆಳಗ್ಗೆ ವಾಮದಪದವು ಸೊಸೈಟಿಯಲ್ಲಿ ಗ್ರೂಪ್‌ನಲ್ಲಿ ಜಮಾ ಮಾಡಿದ್ದ ಹಣದ ವಿಚಾರ ಮಾತನಾಡಿ ಬರುತ್ತೇನೆ ಎಂದು ತೆರಳಿದವಳು ವಾಪಾಸು ಮನೆಗೆ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾಳೆ ಎಂದು ಆಕೆಯ ತಾಯಿ ಭಾರತಿ ಅವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *