ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರು ಶೇಖರಣೆಯ ಸಂದರ್ಭ ಮುಳುಗಡೆ ಪ್ರದೇಶದ ಸಂತ್ರಸ್ತ ರೈತರು ತಮ್ಮ ಮುಳುಗಡೆ ಜಮೀನಿನ ವರತೆ ಪ್ರದೇಶದ  ಹಾಗೂ ಕೃತ ವಳಿಯ ವಿವರವನ್ನು ನಗರಪಾಲಿಕೆಗೆ ಸಲ್ಲಿಸಿದಲ್ಲಿ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಮಂಗಳೂರು ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬುಧವಾರ ಸಂಜೆ   ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರ ಸಭೆಯಲ್ಲಿ ರೈತರ ಅಹವಾಲು ಆಲಿಸಿದ ಬಳಿಕ ಜಿಲ್ಲಾಧಿಕಾರಿಗಳು ಈ ನಿರ್ದೇಶನ ನೀಡಿದ್ದಾರೆ.IMG-20201202-WA0054

ಸಭೆಯಲ್ಲಿ ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್ ,ನಗರಪಾಲಿಕೆ ಎ.ಸಿ ವಿನಯ್    ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್.ಎಮ್. ಪದಾಧಿಕಾರಿಗಳಾದ ಸುದೇಶ್ ಮಯ್ಯ ,ಜಾನ್ ಲೋಬೋ ,ಅಣ್ಣಪ್ಪಯ್ಯ, ಏನ್. ರಾಮ, ಕೃಷ್ಣಪ್ಪ ಮಡಿವಾಳ, ರಾಮಚಂದ್ರರಾವ್, ಕಿರಣ್ ಕುಮಾರ್, ಮೊದಲಾದ ರೈತರು ಇದ್ದರು.

By suddi9

Leave a Reply

Your email address will not be published. Required fields are marked *