ಬಂಟ್ವಾಳ: ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಸಜೀಪ ವಲಯದ ವತಿಯಿಂದ ವಿವಿಧ ಗ್ರಾಪಂ ನ ಪಿಡಿಒಗಳ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಡಿಯೂರಪ್ಪ ಮನವಿ ಸಲ್ಲಿಸಲಾಯಿತು.
ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವುದರ ಜತೆಗೆ ಗೋಮಾಳಗಳನ್ನು ಅಭಿವೃದ್ಧಿಗೊಳಿಸಿ ಜಾನುವಾರುಗಳಿಗೆ ಉಪಯೋಗವಾಗುವಂತೆ ಸೌಕರ್ಯ ಹಾಗೂ ಗೋವುಗಳನ್ಬು ರಕ್ಷಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ತಾಲೂಕಿನ ಸಜೀಪ ಮೂಡ. ಸಜೀಪ ಮುನ್ನೂರು . ಸಜೀಪ ನಡು, ಸಜೀಪ ಪಡು ಗ್ರಾಮಗಳು ಹಾಗೂ ಕಲ್ಲಡ್ಕ ವಲಯದ ವಿಶ್ವ ಹಿಂದೂ ಪರಿಷತ್ ಭಜರಂಗದಳ ವತಿಯಿಂದ ಬಾಳ್ತಿಲ ಮತ್ತು ಗೋಳ್ತಮಜಲು ಗ್ರಾಮ ಪಂಚಾಯತ್ ಗಳ ಪಿಡಿಒಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ವಿಟ್ಲ ಪ್ರಖಂಡ, ಸಜೀಪ ವಲಯದ ಮತ್ತು ಕಲ್ಲಡ್ಕ ವಲಯದ ಪದಾಧಿಕಾರಿಗಳು,ಕಾರ್ಯಕರ್ತರು ಉಪಸ್ಥಿತರಿದ್ದರು.
