ಮೂಡುಬಿದಿರೆ: ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರ ಪಟ್ಟಾಭಿಷೇಕದ ರಜತ ಸಂಭ್ರಮಕ್ಕೆ ಮೂಡುಬಿದಿರೆಯ ಯುವ ಕಲಾವಿದರಿಬ್ಬರು ತಮ್ಮ ಪ್ರತಿಭೆ ಮೂಲಕ ಗೌರವ ಸಲ್ಲಿಸಿದ್ದಾರೆ.

ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ, ಒಂಟಿಕಟ್ಟೆಯ ನಿವಾಸಿ ತಿಲಕ್ ಕುಲಾಲ್ ಅವರು ಲೀಫ್ ಆರ್ಟ್ ಮೂಲಕ ಹಲವು ಗಣ್ಯರ ಚಿತ್ರಗಳನ್ನು ಬಿಡಿಸಿದ್ದು, ಅಶ್ವತ್ಥ ಎಲೆಯಲ್ಲಿ‌ ಅಜಿಲರ ಚಿತ್ರ ಬಿಡಿಸಿ ಅವರಿಗೆ ನೀಡಿದ್ದಾರೆ.

ಮೂಡುಬಿದಿರೆ ಮಾರ್ನಾಡಿನ ಯುವ ಕಲಾವಿದ ಶ್ರವಣ್ ಪೂಜಾರಿ ಅವರು ಚಾರ್ಕೋಲ್ ಆರ್ಟ್ ನಲ್ಲಿ ಬ್ರೂ ಕಾಫಿ ಹುಡಿ ಬಳಸಿ ಅಜಿಲರ ಚಿತ್ರ ಬಿಡಿಸುವ ಮೂಲಕ ಗಮನಸೆಳೆದಿದ್ದಾರೆ.

By suddi9

Leave a Reply

Your email address will not be published. Required fields are marked *