ಪೊಳಲಿ: ಪೊಳಲಿ ಸರಕಾರಿ ಪ್ರೌಢ ಶಾಲೆಯ ಎಂ.ಆರ್.ಪಿ.ಎಲ್‍ನ ಸಿ.ಎಸ್.ಆರ್ ನಿಧಿಯಿಂದ 65 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕೊಠಡಿಗಳ ಉದ್ಘಾಟನೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಶುಕ್ರವಾರ ಉದ್ಘಾಟಿಸಿ ಬಳಿಕ ಮಾತನಾಡಿದ ಶಾಸಕರು ಗ್ರಾಮೀಣ ಮತ್ತು ಪೇಟೆಯ ಶಾಲೆಗಳಲ್ಲಿ ಅದರಲ್ಲು ಖಾಸಗಿ ಮತ್ತು ಸರಕಾರಿ ಸಾಕಷ್ಟು ವ್ಯತ್ಯಾಸಗಳನ್ನು ಕಾಣಬಹುದಾಗಿದ್ದರೂ, ಸರಕಾರವು ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು. 27vp udgatane4

27 rajes naylk

ಹಳ್ಳಿಗಳಲ್ಲಿ ಕಲಿಯುವ ಮಕ್ಕಳು ಪುಣ್ಯವಂತರು. ಯಾಕೆಂದರೆ, ಹಳ್ಳಿಗಳಲ್ಲಿ ಎಲ್ಲಿ ಬೇಕಾದರೂ ಸ್ವಚ್ಛಂದವಾಗಿ ಇರಬಹುದು, ಇತರರೊಂದಿಗೆ ಬೆರೆಯಬಹುದು ಮತ್ತು ಕಲಿತು ಬೆಳೆಯಬಹುದು. ಹೀಗೆ ಹಳ್ಳಿ ಮಕ್ಕಳು ವಿಶೇಷ ಜ್ಞಾನ ಹೊಂದಿರುತ್ತಾರೆ” ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕತೆಯೊಂದನ್ನುದ್ಧರಿಸಿ ಹಳ್ಳಿ ಶಾಲೆಗಳ ಮಹತ್ವ ವಿವರಿಸಿದರು. ಶಾಲಾ ಆಡಳಿತ ಮಂಡಳಿಯಿಂದ ಸಭಾಗ್ರಹಕ್ಕೆ ಮನವಿಗೆ ಸ್ಪಂಧನೆ ನೀಡಿದ ಶಾಸಕರು ಸಭಾಭವನ ನಿರ್ಮಾಣ ಮಾಡಲು ಅನುಧಾನ ಒದಗಿಸುವುದಾಗಿ ಭರವಸೆ ನೀಡಿದರು.

27 veena`ನಮಗೆ ಕೆಲವು ಜವಾಬ್ದಾರಿಗಳಿವೆ. ಸಾರ್ವಜನಿಕರ ರಂಗದ ಉದ್ದಿಮೆಗಳಿಗೆ ತಮ್ಮದೇ ಆದಂತಹ ಕೆಲವು ಜವಾಬ್ದಾರಿಗಳಿರುತ್ತವೆ. ಯಾವುದೇ ಒಂದು ಪ್ರದೇಶದಲ್ಲಿ ಉದ್ದಿಮೆ ನೆಲೆಯಾಗಬೇಕಿದ್ದರೆ, ಆ ಪ್ರದೇಶದ ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ, ಜಲ, ಗಾಳಿ, ಮಾನವ ಸಂಪನ್ಮೂಲ ಉಪಯೋಗಿಸಿಕೊಳ್ಳಬೇಕಾಗುತ್ತದೆ. ಹೀಗೆ ಬೆಳೆಯುವ ಉದ್ದಿಮೆಯು ಸಮಾಜಕ್ಕೆ ತನ್ನದೇ ಆದ ಋಣದಲ್ಲಿರುತ್ತದೆ. ಲಾಭಾಂಶ ಬಂದಾಗ ಉದ್ದಿಮೆಗಳು ಸಮಾಜಕ್ಕೆ ಆ ಋಣ ಸಂದಾಯ ಮಾಡಬೇಕಾಗುತ್ತದೆ. ಅದನ್ನೇ ಸಾಮಾಜಿಕ ಜವಾಬ್ದಾರಿ(ಸಿಎಸ್‌ಆರ್) ಎಂದು ಹೇಳುತ್ತೇವೆ. ಎಂಆರ್‌ಪಿಎಲ್ ಉದ್ದಿಮೆ ಈಗ ಇಲ್ಲಿ ಅಂತಹ ಕರ್ತವ್ಯ ನಿಭಾಯಿಸುತ್ತಿದೆ” ಎಂದು ಎಂಆರ್‌ಪಿಎಲ್ ಅಧಿಕಾರಿ ವೀಣಾ ಶೆಟ್ಟಿ ಅಭಿಪ್ರಾಯಪಟ್ಟರು.

ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಆಶೀರ್ವಚನ ನೀಡಿದರು.

27swamiji

27vpudgatane

27vp udgataner05

ಇದೇ ಸಂದರ್ಭದಲ್ಲಿ ವೀಣಾ ಶೆಟ್ಟಿ, ಗುತ್ತಿಗೆದಾರ ಸಂದೀಪ್ ಶೆಟ್ಟಿ, ಕೊಯಿಲ ಶಾಲೆಗೆ ಮುಖ್ಯ ಶಿಕ್ಷಕಾರಾಗಿ ಭರ್ತಿಹೊಂದಿದ ಸಿಪ್ರಯಾನ್ ಡಿ.ಸೋಜ ಅವರುಗಳನ್ನು ಸನ್ಮಾನಿಸಲಾಯಿತು ಹಾಗೂ 2019-20ನೇ ಶಾಲಿನ ಅತ್ಯಾಧಿಕ ಅಂಕ ಗಳಿಸಿದ  ಮಹನ್ ವಿದ್ಯಾರ್ಥಿಯನ್ನು  ಪುರಸ್ಕರಿಸಲಾಯಿತು.

ಎಂ.ಆರ್.ಪಿ.ಎಲ್ ಡಿಜಿಎಂ ವೀಣಾ ಶೆಟ್ಟಿ, ಪೊಳಲಿ ದೇವಳದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ. ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ತಾ.ಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾ.ಪಂ.ಸದಸ್ಯ ಯಶವಂತ ಪೂಜಾರಿ, ಐಎಎಸ್ ಅಧಿಕಾರಿ ಮೊನಾರೂತ್, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ, ಮುಖ್ಯ ಶಿಕ್ಷಕರಾಧಕೃಷ್ಣ ಭಟ್ ಕೆ. ಪ್ರಸ್ತಾವಿಕವಾಗಿ ಮಾತನಾಡಿದರು. ಎಸ್.ಡಿಎಂ. ಕಾರ್ಯದಕ್ಷ ವೆಂಕಟೇಶ್ ನಾವಡ ಸ್ವಾಗತಿಸಿ, ಸಹಶಿಕ್ಷಕಿ ಉಮಾ ವಂದಿಸಿದರು.ಜಾನೆಟ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *