ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ತುಲೆಮುಗೇರ್ನಲ್ಲಿ ನೀರುಪಾಲದ ನಾಲ್ವರಲ್ಲಿ ಇಬ್ಬರ ಶವ ಪತ್ತೆಯಾಗಿದೆ.

ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಹರ್ಷಿತಾ ಹಾಗೂ ಡಿಪ್ಲೊಮಾ ವಿದ್ಯಾರ್ಥಿ, ವೇಣೂರಿನ ಸುಭಾಸ್ ಅಚಾರ್ಯ ಅವರ ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತಲಾಯಿತು.

ನೀರಿನಲ್ಲಿ ಮುಳುಗಿರುವ ನಿಖಿಲ್ ಹಾಗೂ ರವಿ ಅವರ ಮೃತದೇಹ ಪತ್ತೆಯಾಗಿಲ್ಲ. ರಾತ್ರಿ ವೇಳೆ ಮೃತದೇಹ ಶೋಧ ಕಾರ್ಯಾಚರಣೆ ಕಷ್ಟಕರವಾದ ಕಾರಣ ಬುದವಾರ ಬೆಳಗ್ಗೆ ಮೃತದೇಹಗಳ ಶೋಧ ಕಾರ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

