ಬಂಟ್ವಾಳ: ತಾಲೂಕು ಮಟ್ಟದ ವಿಶ್ವಜನಸಂಖ್ಯಾ ದಿನಾಚರಣೆಯನ್ನು ಎಸ್. ಜಿ. ಎಸ್. ವೈ ಸಭಾಂಗಣ ಬಿ. ಸಿ. ರೋಡ್‌ನಲ್ಲಿ ಆರೋಗ್ಯ ಇಲಾಖಾ ವತಿಯಿಂದ ನ.20ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು, ತಾ. ಪಂ. ಅಧ್ಯಕ್ಷ    ಚಂದ್ರಹಾಸ ಕರ್ಕೇರಾ ಉದ್ಘಾಟಿಸಿ ಮಾತನಾಡಿದ ಅವರು ಜನಸಂಖ್ಯಾ ಸ್ಫೋಟವನ್ನು ತಡೆಗಟ್ಟುವುದು ಪ್ರತಿಯೊಬ್ಬರ ಜವಬ್ದಾರಿ ಹಾಗೂ ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇನ್ನೂ ಹೆಚ್ಚಿನ ಮುತುವರ್ಜಿಯಿಂದ ಕರ್ತವ್ಯ ನಿಭಾಯಿಸಬೇಕೆಂದು ತಿಳಿಸಿದರು.

IMG-20201120-WA0042

 ತಾ. ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಮಾತನಾಡಿ  ಏರುತ್ತಿರುವ ಜನಸಂಖ್ಯೆ ದೇಶದ ಅಭಿವೃದ್ಧಿಗೆ ಮಾರಕ ಹಾಗೂ ಜನಸಂಖ್ಯಾ ನಿಯಂತ್ರಣದಲ್ಲಿ ಆಶಾ ಕಾರ್ಯಕರ್ತೆಯ ಪಾತ್ರ ಪ್ರಮುಖ ಎಂಬ ಸಂದೇಶ ನೀಡಿದರು.  ಸಾಮಾಜಿಕ ನ್ಯಾಯ ಸಮಿತಿ  ಅಧ್ಯಕ್ಷೆ  ಮಲ್ಲಿಕಾ ಶೆಟ್ಟಿ ಹಾಗೂ ಕಾರ್ಯ ನಿರ್ವಾಹಣಾಧಿಕಾರಿ ರಾಜಣ್ಣ  ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. IMG-20201120-WA0036

 ತಹಶೀಲ್ದಾರರಾದ ರಶ್ಮಿ ಎಸ್. ಆರ್. ,  ಗಾಯತ್ರಿ ಬಾಯಿ  ಹಾಗೂ  ಸುಧಾ ಜೋಷಿ, ಶಿಶು ಅಭಿವೃದ್ಧಿ ಇಲಾಕಾ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಡಾ. ವಿಶ್ವೇಶ್ವರ ಭಟ್, ವೈದ್ಯಾಧಿಕಾರಿ ಇವರು ಸಂಪನ್ಮೂಲ ವ್ಯಕ್ತಿಯಾಗಿ “ವಿಪತ್ತಿನಲ್ಲಿಯು ಕುಟುಂಬ ಯೋಜನೆಯ ತಯಾರಿ ಸದೃಢ ರಾಷ್ಟ್ರ  ಮತ್ತು ಕುಟುಂಬದ ಸಂಪೂರ್ಣ ಜವಾಬ್ದಾರಿ’’ ಎಂಬ ವಿಚಾರದ ಬಗ್ಗೆ ಮಾಹಿತಿ ನೀಡಿದರು.

ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಾಧಕರನ್ನು ಸನ್ಮಾಯಿಸಲಾಯಿತು.  ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾಪ್ರಭು  ಸ್ವಾಗತಿಸಿ ಕುಸುಮ ವಂದಿಸಿದರು. ಸುರೇಶ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *