ಬಂಟ್ವಾಳ: ಹ್ಯುಮಾನಿಟಿ ಕ್ಲಬ್ ಬಂಟ್ವಾಳ ಇದರ ನೇತೃತ್ವದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬಂಟ್ವಾಳ ಇದರ ಸಹಯೋಗದೊಂದಿಗೆ 3ನೇ ಕೋವಿಡ್ ಪರೀಕ್ಷಾ ಶಿಬಿರ ಗುರುವಾರ ಬಂಟ್ವಾಳದಲ್ಲಿ ನಡೆಯಿತು.

BTW_NOV12_2
ಬಂಟ್ವಾಳ ಬೈಪಾಸಿನ ಭದ್ರ ಗ್ಯಾಸ್ ಏಜೆನ್ಸಿ, ಅಗ್ನಿಶಾಮಕ ದಳ, ಅಟೋಲೈನ್ಸ್ ಕಾರ್ ಗ್ಯಾರೇಜ್, ಶ್ರೀ ಗಣೇಶ್ ಟಯರ್ ವಕ್ರ್ಸ್, ರಾಮ್‍ಗಣೇಶ್ ಲಾರಿ ಗ್ಯಾರೇಜ್‍ನ ಸಿಬ್ಬಂದಿಗಳು ಸೇರಿದಂತೆ ಒಟ್ಟು 85 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡರು. ಈ ಸಂದರ್ಭ ಹ್ಯುಮ್ಯಾನಿಟಿ ಟ್ರಸ್ಟಿ ಪ್ರಶಾಂತ್ ಫ್ರಾಂಕ್, ಸದಸ್ಯೆ ಶ್ರೀಪ್ರದಾ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಲ್ಯಾಬ್‍ಟೆಕ್ನಿಷನ್‍ಗಳಾದ ಫರ್ನಾಝ್, ಶುಭಲಕ್ಷ್ಮೀ, ಕಿರಿಯ ಆರೋಗ್ಯ ಸಹಾಯಕಿ ನಮಿತಾ ಉಪಸ್ಥಿತರಿದ್ದರು. ಭದ್ರ ಗ್ಯಾಸ್ ಏಜೆನ್ಸಿಯ ಮಾಲಕ ಮಂಜುನಾಥ ಆಚಾರ್ಯ, ಅಟೋಲೈನ್ಸ್ ಗ್ಯಾರೇಜ್‍ನ ಸುಧಾಕರ ಸಾಲ್ಯಾನ್ ಸಹಕರಿಸಿದರು.

By suddi9

Leave a Reply

Your email address will not be published. Required fields are marked *