ಕೋಲಾರ: ಮೌಲ್ಯವರ್ಧಿತ ತರಬೇತಿಗಳ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಂಡು ಮಹಿಳೆಯರು ಉದ್ಯಮಶೀಲರಾಗಿ ಅಭಿವೃದ್ಧಿ ಹೊಂದಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಪಾಲಿ ಹೇಳಿದರು.ನಗರದ ಗಲ್‍ಪೇಟೆಯಲ್ಲಿ ಗುರುವಾರ ಗೋದ್ರೇಜ್ ವೃತ್ತಿ ಸಂಸ್ಥೆ ಹಾಗೂ ಕೌಶಲ್ಯ ದರ್ಪಣ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬ್ಯುಟಿಷಿಯನ್ ಮಹಿಳೆಯರಿಗೆ ಮೌಲ್ಯ ವರ್ಧಿತ ಕಾರ್ಯಕ್ರಮದಲ್ಲಿ ಮೊದಲ ಹಂತ ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರ ಮತ್ತು ಸ್ವಚ್ಛತಾ ಕಿಟ್‍ಗಳನ್ನು ಹಾಗೂ ಕೊರೊನಾ ಕವಚ ವಿಮಾ ಪತ್ರಗಳನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.13kolar3

ಈಗಾಗಲೇ ಉದ್ಯಮ ಶೀಲರಾಗಿರುವವರು ಕಾಲಕ್ಕೆ ತಕ್ಕಂತೆ ಮೌಲ್ಯವರ್ಧಿತ ತರಬೇತಿಗಳನ್ನು ಪಡೆದುಕೊಳ್ಳುವುದು ಅತ್ಯಗತ್ಯ, ಇಂತ ಕಾರ್ಯಕ್ರಮ ರೂಪಿಸಿರುವ ಗೋದ್ರೇಜ್ ಹಾಗೂ ದರ್ಪಣ ಕೌಶಲ್ಯ ತರಬೇತಿ ಸಂಸ್ಥೆಗಲ ಕಾರ್ಯವನ್ನು ಶ್ಲಾಸಿದರು.ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಶೀಲಾ ಮಾತನಾಡಿ, ಉದ್ಯೋಗಿನಿ ಹಾಗೂ ಇನ್ನಿತರ ಸರಕಾರಿ ಯೋಜನೆಗಳನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ಪರಿಸರವಾದಿ ಕೆ.ಎನ್.ತ್ಯಾಗರಾಜು ಮಾತನಾಡಿ, ನಿತ್ಯಬಳಕೆ ವಸ್ತುಗಳ ಮೂಲಕ ಪಾಸ್ಟಿಕ್ ತ್ಯಾಜ್ಯ ಸೃಷ್ಟಿಸುವುದನ್ನು ತಡೆಗಟ್ಟಲು ಗೃಹಬಳಕೆ ವಸ್ತುಗಳನ್ನು ಹೇಗೆ ಮನೆಯಲ್ಲಿಯೇ ತಯಾರಿಸಿಕೊಂಡು ಬಳಸಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು.ಕೌಶಲ್ಯ ದರ್ಪಣಸಂಸ್ಥೆಯ ಅಧ್ಯಕ್ಷ ಗೋಪಿನಾಥ್ ಮಾತನಾಡಿ, ಹಾಲಿ ಉದ್ಯಮದಲ್ಲಿ ಮೌಲ್ಯವರ್„ತ ಸೇವೆಗಳನ್ನು ಹೇಗೆಲ್ಲಾ ರೂಢಿಸಿಕೊಳ್ಳಬಹುದು ಎಂದು ವಿವರಿಸಿ, ತಮ್ಮ ಸಂಸ್ಥೆಯು ನಡೆಸುತ್ತಿರುವ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಸದುಪಯೋಗಿಸಿಕೊಳ್ಳಬೇಕೆಂದರು.

ಗೋದ್ರೇಜ್ ವೃತ್ತಿ ಸಂಸ್ಥೆಯ ತಾಸೀನಾ ಮಾತನಾಡಿ, ತಮ್ಮ ಸಂಸ್ಥೆಯು ಬ್ಯುಟಿಷಿಯನ್ ಮೌಲ್ಯವರ್„ತ ತರಬೇತಿ ನೀಡುವ ಕಾರ್ಯಕ್ರಮವನ್ನು ಕೋಲಾರ ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಆರಂಭಿಸಿತು. ರಾಜ್ಯದ ಫೆಬ್ರವರಿಯಲ್ಲಿಯೇ ಆರಂಭಿಸಿತ್ತು. ಕೋಲಾರ ಸುತ್ತಮುತ್ತಲ ಗ್ರಾಮಾಂತರ ಪ್ರದೇಶದ ಸುಮಾರು 50 ಮಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ, ಕೊರೊನಾ ಎದುರಾಗಿದ್ದರಿಂದ ತರಬೇತಿ ತಡವಾಯಿತಾದರೂ, ಕೊರೊನಾ ಮಾರ್ಗಸೂಚಿ ಪ್ರಕಾರ ಬ್ಯುಟಿಷಿಯನ್ ವೃತ್ತಿಯನ್ನು ಹೇಗೆ ಮುಂದುವರೆಸಬಹುದು, ಸ್ವಚ್ಛತೆ ಹೇಗೆ ಕಾಪಾಡಿಕೊಳ್ಳಬೇಕು ಇತ್ಯಾದಿ ತರಬೇತಿಯನ್ನು ಜೋಡಿಸಿಕೊಳ್ಳಲಾಯಿತು ಎಂದು ತಿಳಿಸಿದರು. ಈಗ ಮೊದಲ ಹಂತದ ತರಬೇತಿ ಮುಕ್ತಾಯವಾಗಿದ್ದು, ಇನ್ನು ಮೂರು ಹಂತಗಳ ತರಬೇತಿ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ದರ್ಪಣ ಸಂಸ್ಥೆಯ ಖಜಾಂಚಿ ಗೀತಾಪ್ರಕಾಶ್, ಸಿಡಾಕ್ ಸಂಸ್ಥೆಯ ಅಜಿತ್, ಜಿಪಂನ ಸುಂದರೇಶ್, ಮಹಿಳಾ ಶಕ್ತಿಯ ಲೇಖಾ ಇತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ, ಸ್ವಚ್ಛತಾ ಕಿಟ್ ಹಾಗೂ ವಿಮಾ ಬಾಂಡ್‍ಗಳನ್ನು ವಿತರಿಸಲಾಯಿತು.ಕಾಂತಾದೇವಿ ಪ್ರಾರ್ಥಿಸಿ, ರುಕ್ಸಾನಾ ಸ್ವಾಗತಿಸಿ, ಶಿಬಿರದ ಯೋಜನಾ ವ್ಯವಸ್ಥಾಪಕಿ ನಾಗಮಣಿ ನಿರೂಪಿಸಿ, ಪದ್ಮ ವಂದಿಸಿದರು.

ಚಿತ್ರಶೀರ್ಷಿಕೆ:(ಫೋಟೊ-13ಕೋಲಾರ3):ಕೋಲಾರ ನಗರದ ಗಲ್‍ಪೇಟೆಯ ದರ್ಪಣ ಕೌಶಲ್ಯ ತರಬೇತಿ ಸಂಸ್ಥೆಯಲ್ಲಿ ಗುರುವಾರ ಬ್ಯುಟಿಷಿಯನ್ ಮೌಲ್ಯವರ್ಧಿತ ತರಬೇತಿ ಸಮಾರೋಪ ಸಮಾರಂಭವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಪಾಲಿ ಇತರರು ಉದ್ಘಾಟಿಸಿದರು.

By suddi9

Leave a Reply

Your email address will not be published. Required fields are marked *