ಮೂಡಬಿದಿರೆ: ಇಲ್ಲಿನ ಮಾಜಿ ಶಾಸಕ ರತನ್ ಕುಮಾರ್ ಕಟ್ಟೆಮಾರ್ ಭಾನುವಾರ ಮಂಗಳೂರಿನ ಮನೆಯಲ್ಲಿ ನಿಧನರಾದರು.
ಸ್ವತಂತ್ರ ಪಕ್ಷದ ಮೂಲಕ ಸ್ಪರ್ಧಿಸಿ 1967ರಲ್ಲಿ ಅಂದಿನ ಕಾಂಗ್ರೆಸ್ ಅಭ್ಯರ್ಥಿ ಬಿ.ಗಂಗಾಧರ್ ದಾಸ್ ಅವರ ವಿರುದ್ದ ಜಯ ಸಾಧಿಸಿದರು.
1967 ರಿಂದ 1971ವರೆಗೆ ಶಾಸಕರಾಗಿದ್ದ ಅವರು, ಭೂ ಮಸೂದೆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.ಬಡವರ ಪರ ನಿಲುವನ್ನು ಹೊಂದಿದ್ದರು. ಮಂಗಳೂರಿನ ತನ್ನ ಮನೆಯಲ್ಲಿ ಬಡಮಕ್ಕಳಿಗೆ ವಸತಿ, ಶಿಕ್ಷಣ, ಊಟವನ್ನು ನೀಡಿದ್ದರು
