ಬಂಟ್ವಾಳ: ಬಂಟ್ವಾಳ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿಕಾಂಗ್ರೇಸ್ ಹಾಗೂ ಎಸ್ ಡಿ ಪಿಐ ಒಳ ಒಪ್ಪಂದಮಾಡಿಕೊಂಡಿದ್ದು, ಈ ಎರಡೂ ಪಕ್ಷಗಳ ಬಣ್ಣ ಬಯಲಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲು ಲೇವಡಿ ಮಾಡಿದರು.
ಬಂಟ್ವಾಳ ಪುರಸಭೆಯ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಗೆ ೧೩ ಮತಗಳ ಬಹುಮತವಿದ್ದರೂ, ಕಾಂಗ್ರೇಸ್ ಹಾಗೂ ಎಸ್.ಡಿ.ಪಿ.ಐ ನ ಒಳ ಒಪ್ಪಂದದಿಂದ ಅಧಿಕಾರ ಕಾಂಗ್ರೇಸ್ ಪಾಲಾಗಿದೆ. ಚುನಾವಣಾ ಪರ‍್ವದಲ್ಲಿ ಎರಡೂ ಪಕ್ಷಗಳು ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿಕೊಂಡಿದ್ದರು.ಇದೀಗ ಎರಡು ಪಕ್ಷಗಳು ಪರಸ್ಪರ ಮೈತ್ರಿಮಾಡಿಕೊಂಡು ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದರು.
ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಅಭಿನಂದನೆ
ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ ಅವರು, ಅಭಿವೃದ್ಧಿ ವಿಚಾರದಲ್ಲಿ ಸಂಸದ ಹಾಗೂ ಶಾಸಕನ ನೆಲೆಯಲ್ಲಿ ಬಿಜೆಪಿ ಸಹಕಾರ ನೀಡಲಿದೆ ಎಂದರು. ಶಾಸಕ ರಾಜೇಶ್ ನಾಯ್ಕ್ ಉಪಸ್ಥಿತರಿದ್ದರು.

