ಬಂಟ್ವಾಳ: ಸಮಾಜಸೇವೆಯಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ನೆತ್ತರಕೆರೆ ನವೋದಯ ಮಿತ್ರ ಕಲಾ ವೃಂದಕ್ಕೆ ಈಬಾರಿಯ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಕಲಾವೃಂದವು ಮೂವತ್ತ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿಯೇ ಜನಪರ ಸೇವೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದಿ ಬಂದಿದ್ದು, ಕಲಾವೃಂದದ ಸರ್ವಸದಸ್ಯರಿಗೆ ಸಂತಸವನ್ನು ಇಮ್ಮಡಿಗೊಳಿಸಿದೆ.
ಧಾರ್ಮಿಕ,ಶೈಕ್ಷಣಿ
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀ ನೊವಾಸ ಪೂಜಾರಿ ಅವರು ನವೋದಯ ಮಿತ್ರಕಲಾ ವೃಂದದ ಪದಾಧಿಕಾರಿಗಳು,ಸದಸ್ಯರ ಪರವಾಗಿ ಅಧ್ಯಕ್ಷ ಸುರೇಶ್ ಭಂಡಾರಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದರು.ಈ ಸಂದರ್ಭದಲ್ಲಿ ಸಂಚಾಲಕ ದಾಮೋದರ ನೆತ್ತರಕೆರೆ ಕಲಾ ವೃಂದದ ಪದಾಧಿಕಾರಿಗಳು,ಸದಸ್ಯರು ಹಾಜರಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್,ಶಾಸಕರಾದ ವೇದವ್ಯಾಸ ಕಾಮತ್,ಡಾ.ಭರತ್ ಶೆಟ್ಟಿ,ಮೇಯರ್ ದಿವಾಕರ್ ಪಾಂಡೇಶ್ವರ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್,ದಕಜಿಪಂಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಮತ್ತಿರರು ಉಪಸ್ಥಿತರಿದ್ದರು.
