ಮೂಡುಬಿದಿರೆ: ಕರ್ನಾಟಕ ರಾಜ್ಯ ಸರ್ಕಾರ ಕೊಡಮಾಡುವ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಕಂಬಳ ಓಟಗಾರ ಶ್ರೀನಿವಾಸ ಗೌಡ ಅಶ್ವತ್ಥಪುರ, ಪ್ರವೀಣ್ ಕೋಟ್ಯಾನ್ ಪಣಪಿಲ ಆಯ್ಕೆಯಾಗಿದ್ದಾರೆ.
ಕಂಬಳ ಕ್ಷೇತ್ರದ ಮತ್ತೋರ್ವ ಓಟಗಾರ ಬೆಳ್ತಂಗಡಿ ತಾಲೂಕಿನ ವೇಣೂರು ಹೊಕ್ಕಾಡಿಗೋಳಿ ಹಕ್ಕೇರಿಯ ಸುರೇಶ್ ಎಂ.ಶೆಟ್ಟಿ ಕೂಡ ಆಯ್ಕೆಯಾಗಿದ್ದಾರೆ.ಶ್ರೀನಿವಾಸ ಗೌಡ ಕಳೆದ ಸಾಲಿನ ಕಂಬಳ ಋತುವಿನಲ್ಲಿ ತಮ್ಮ ಕಂಬಳದ ಕರೆಯಲ್ಲಿ ದಾಖಲೆ ವೇಗದ ಓಟದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದ್ದರು. ಈ ಹಿಂದೆ ಬಾಹುಬಲಿ ತೆಲುಗು ಸಿನಿಮಾದಲ್ಲಿ ಗೂಳಿ ಓಡಿಸುವ ಸನ್ನಿವೇಶದಲ್ಲೂ ಕಾಣಿಸಿಕೊಂಡಿದ್ದರು.

