ಬಂಟ್ವಾಳ:ತುಳುನಾಡ ರಕ್ಷಣಾ ವೇದಿಕೆ ವಾಮದಪದವು ಘಟಕದ ವತಿಯಿಂದ ತುರವೇ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಅವರ ಜನ್ಮ ದಿನಾಚರಣೆ ಪ್ರಯುಕ್ತ ದೇರಳಕಟ್ಟೆ ಯೇನಪೋಯ ವೈದ್ಯಕೀಯ ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರ ಗುರುವಾರ ಮಾವಿನಕಟ್ಟೆ ಶಿವನಗರ ಶಾಲಾ ವಠಾರದಲ್ಲಿ ನಡೆಯಿತು.

2910pkt2
ಜಿ.ಪಂ.ಸದಸ್ಯ ಎಂ. ತುಂಗಪ್ಪ ಬಂಗೇರ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ತುಳುನಾಡಿನ ಜನತೆಯನ್ನು ಒಗ್ಗೂಡಿಸಿ ತುಳು ಭಾಷೆ, ಸಂಸ್ಕೃತಿ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ತುಳುನಾಡ ರಕ್ಷಣಾ ವೇದಿಕೆ ಕಾರ್ಯ ಅಭಿನಂದನೀಯ. ಜನರು ಸಂಘಟಿತರಾದಾಗ ಹೋರಾಟಕ್ಕೆ ಶಕ್ತಿ ತುಂಬುವುದು ಎಂದರು. ತುರವೇ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬೇರೆ ರಾಜ್ಯಗಳಲ್ಲಿ ಪ್ರಾದೇಶಿಕ ಚಿಂತನೆ ಇದೆ. ನಮ್ಮ ಜಿಲ್ಲೆ, ತುಳುನಾಡಿನ ಬಗ್ಗೆ ಅಭಿಮಾನ ಬೇಕು. ಹಿರಿಯರ ಸಂಪ್ರದಾಯ, ಗೌರವಗಳನ್ನು ಉಳಿಸಿಕೊಂಡು ಹೋಗಬೇಕು ಎಂದರು.

20201030_174948
ತುರವೇ ಕೇಂದ್ರ ಸಮಿತಿ ಪದಾಧಿಕಾರಿಗಳಾದ ರಾಘವೇಂದ್ರ ರಾವ್, ಜ್ಯೋತಿಕಾ ಜೈನ್, ಜೋಸೆಫ್, ಫಾರೂಕ್, ರೋಷನ್,ಅಶ್ವತ್ಥ್ , ರಮೇಶ್ ಪೂಜಾರಿ,ಶಿವಣ್ಣ ಎಲ್., ಉದ್ಯಮಿಗಳಾದ ಶ್ರೀಧರ ಪೈ ವಾಮದಪದವು, ಜಯಚಂದ್ರ ಬೊಳ್ಮಾರ್, ಮೋಹನ್ ಶೆಟ್ಟಿ ನರ್ವಲ್ದಡ್ಡ, ಪುರುಷೋತ್ತಮ ಶೆಟ್ಟಿ ವಾಮದಪದವು, ಚಂದ್ರಶೇಖರ ಶೆಟ್ಟಿ, ಹಂಝ ಬಸ್ತಿಕೋಡಿ, ಯಶೋಧರ ಶೆಟ್ಟಿ ದಂಡೆ, ವಿಜಯ ರೈ, ದಿನೇಶ್ ಶೆಟ್ಟಿ ದಂಬೆದಾರ್, ವಸಂತ ಶೆಟ್ಟಿ ಕೇದಗೆ, ಕಮಲ್ ಶೆಟ್ಟಿ ಬೊಳ್ಳಾಜೆ, ಪ್ರಭಾಕರ ಶೆಟ್ಟಿ, ಪದ್ಮನಾಭ ಶೆಟ್ಟಿ, ರಫೀಕ್ ವಾಮದಪದವು, ಚೈನ್ನೆತ್ತೋಡಿ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಯತೀಶ್ ಶೆಟ್ಟಿ, ಸದಸ್ಯರಾದ ಅನಂತ ಪೈ, ಜಯರಾಮ ಶೆಟ್ಟಿ ಕಾಪು, ಎಡ್ತೂರು ಘಟಕಾದ್ಯಕ್ಷ ಗಣೇಶ್ ಶೆಟ್ಟಿ ನರ್ವಲ್ದಡ್ಡ, ವಾಮದಪದವು ಘಟಕ ಯುವ ಘಟಕಾಧ್ಯಕ್ಷ ಪ್ರಕಾಶ್ ಪೂಜಾರಿ, ಮಹಿಳಾ ಘಟಕ ಅಧ್ಯಕ್ಷೆ ಜೆಸಿಂತಾ ಡಿಸೋಜ, ಪದಾಧಿಕಾರಿಗಳಾದ ಸುಭಾಷ್ ನಾಯಕ್, ಶುಭ ಲಕ್ಷ್ಮೀ , ಮಮತಾ ಪೂಜಾರಿ, ವನಿತಾ ನಾಯಕ್, ವನಿತಾ , ಹರೀಶ್ ಕುದ್ಕೋಳಿ, ಪ್ರದೀಪ್ ಕುಕ್ಕಿಪಾಡಿ, ಅವಿನಾಶ್ ಬದ್ಯಾರ್, ಯೇನಪೋಯ ವೈದ್ಯಕೀಯ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸುಭಾಷ್ ರೈ, ಡಾ. ಬಾಲಕೃಷ್ಣ ಕುಲಾಲ್, ಡಾ.ಆನಂದ್, ಸಾರ್ವಜನಿಕ ಸಂಪರ್ಕಾಧಿಕಾರಿ ಅಬ್ದುಲ್ ರಝಾಕ್ ಮತ್ತಿತರರು ಉಪಸ್ಥಿತರಿದ್ದರು.20201030_175036

ವಾಮದಪದವು ಘಟಕ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಗೌರವಾಧ್ಯಕ್ಷ ಲಾದ್ರೂ ಮಿನೇಜಸ್ ವಂದಿಸಿದರು. ರಂಗ ಕಲಾವಿದ ಪುರುಷೋತ್ತಮ ಕೊಯಿಲ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ರಕ್ತದಾನ ಹಾಗೂ ಆಯುರ್ವೇದ ತಜ್ಞರಿಂದ ಆರೋಗ್ಯ ತಪಾಸಣೆ ಮತ್ತು ಉಚಿತ ಆಯುಷ್ ಔಷಧಿ ವಿತರಿಸಲಾಯಿತು.

By suddi9

Leave a Reply

Your email address will not be published. Required fields are marked *