ಬಂಟ್ವಾಳ:ಇಲ್ಲಿನ ವಗ್ಗ ನಿವಾಸಿ ಕೊಂಕಣಿ ಸಾಹಿತಿ, ಕನ್ನಡ ಕಥೆಗಾರ ವಲೇರಿಯನ್ ಡಿಸೋಜ ಇವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಅರ್ಹವಾಗಿಯೇ ಒಲಿದು ಬಂದಿದೆ. ಕಳೆದ 50 ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿರುವ ಇವರು ಮೂಲತಃ ಇಲ್ಲಿನ ಕಾವಳಪಡೂರು ಗ್ರಾಮದ ವಗ್ಗ ನಿವಾಸಿಯಾಗಿದ್ದು, ಸ್ಥಳೀಯರು ಇವರನ್ನು ಆತ್ಮೀಯವಾಗಿ ‘ವಲ್ಲಿ ವಗ್ಗ’ ಎಂದೇ ಕರೆಯುತ್ತಿದ್ದರು.

ತನ್ನ 17 ನೇ ವಯಸ್ಸಿನಲ್ಲೇ ಸಣ್ಣ ಕಥೆ ಬರೆಯಲು ಆರಂಭಿಸಿದ್ದ ಇವರು ಕಳೆದ 56 ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಬರೆದ ನೂರಾರು ಕೊಂಕಣಿ ಸಣ್ಣ ಕಥೆ, ಕವನ, ಲೇಖನ, ಅಂಕಣ ಬರಹಗಳು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದ್ದು, ಆಯ್ದ ಸಣ್ಣ ಕಥೆಗಳು ಹಿಂದಿ, ತೆಲುಗು, ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿದೆ. ಇವರು ಸ್ವತಃ ಅನುವಾದಿಸಿದ ಹಲವು ಕಥೆ, ಕಥಾ ಸಂಕಲನ ಮತ್ತು ಕವನ ಸಂಕಲನ ವಿವಿಧ ಕನ್ನಡ ದಿನ ಪತ್ರಿಕೆ ಮತ್ತು ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಹಲವಾರು ವಿವಿಧ ಕವಿ ಗೋಷ್ಠಿ ಮತ್ತು ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸಿದ ಅನುಭವ ಹೊಂದಿದ್ದಾರೆ.
ಈಗಾಗಲೇ ಕೊಂಕಣಿ ಸಾಹಿತ್ಯ ಅಕಾಡೆಮಿ, ದಾಯ್ಜಿ ದುಬ-2019 ಪ್ರಶಸ್ತಿ, ಕೊಂಕಣಿ ಕುಟಾಮ್ ಬಹರೈನ್, ಮಂಗಳೂರು ಸಂದೇಶ ಪ್ರತಿಷ್ಠಾನ ಸಾಹಿತ್ಯ ಗೌರವ ಪ್ರಶಸ್ತಿ ನೀಡಿದೆ. ವಾತರ್ಾ ಇಲಾಖೆಯು ಇವರ ಬಗ್ಗೆ ಸಾಕ್ಷ್ಯ ಚಿತ್ರ ತಯಾರಿಸಿದೆ.
