ಬಂಟ್ವಾಳ:  ಆಸ್ಪತ್ರೆಗೆ ತೆರಳಿ ಕಣ್ಣು ತಪಾಸಣೆ ಮಾಡಲು ಸಾಧ್ಯವಾಗದವರ ಮನೆಗೆ ತೆರಳಿ  ಅವರ ಮನೆಯಲ್ಲಿಯೇ ಕಣ್ಣು ಪರೀಕ್ಷೆ ಮಾಡಿ ಉಚಿತವಾಗಿ ಕನ್ನಡಕ ನೀಡುವ  ‘ಪೈಲೆಟ್ ಪ್ರಾಜೆಕ್ಟ್’  ಎಂಬ ಹೊಸ ಯೋಜನೆಯೊಂದನ್ನು ಕಾರ್ಯರೂಪಕ್ಕೆ ತರಲು ಉದ್ದೇಶಿಸಲಾಗಿದ್ದು,ಈ ನೂತನ ಯೋಜನೆಯನ್ನು ಕಲ್ಲಡ್ಕದಿಂದಲೇ ಆರಂಭಿಸುವ ಯೋಚನೆ ಇದೆ ಎಂದು ಮಂಗಳೂರು ಪ್ರಸಾದ್ ನೇತ್ರಾಲಯದ ಸಂಸ್ಥಾಪಕರಾದ ಡಾ. ಕೃಷ್ಣಪ್ರಸಾದ್ ಅವರು  ತಿಳಿಸಿದ್ದಾರೆ.

kanndaka 7

kannada 6

  ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ  ಮತ್ತು ಮಂಗಳೂರು ಪ್ರಸಾದ್ ನೇತ್ರಾಲಯದ ಜಂಟಿ ಆಶ್ರಯದಲ್ಲಿ ಗುರುವಾರ  ಶ್ರೀರಾಮ ಪ್ರಾಥಮಿಕ ಶಾಲಾ ವಿಭಾಗದ ವೇದವ್ಯಾಸ ಧ್ಯಾನ ಮಂದಿರದಲ್ಲಿ ನಡೆದ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
 ನಾವೀಗ ಉತ್ತಮ ಗುಣಮಟ್ಟದ ಕನ್ನಡಕವನ್ನು ವಿತರಿಸಲಾಗುತ್ತಿದ್ದು, ಶ್ರೀರಾಮ ವಿದ್ಯಾಕೇಂದ್ರದ ಪ್ರಮುಖರಿಂದ ಪತ್ರವನ್ನು ಪಡೆದು ನಮ್ಮ ಸಂಸ್ಥೆಗೆ ಬಂದಲ್ಲಿ ದೃಷ್ಟಿದೋಷ ಪರೀಕ್ಷೆ ಮತ್ತು ಕನ್ನಡಕದ ಬದಲಾವಣೆಯನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದರು.

kannadaka 4

kannadaka

ಅಧ್ಯಕ್ಷತೆಯನ್ನು ವಹಿಸಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಅವರು ಮಾತನಾಡಿ “ಶ್ರೀರಾಮ ವಿದ್ಯಾಕೇಂದ್ರವು ಪ್ರತೀ ವರ್ಷ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಸಂಸ್ಥೆಯು ಸಂಸ್ಕಾರಯುತವಾದ ಶಿಕ್ಷಣದ ಜೊತೆಗೆ ಸಮಾಜದ ಹಿತವನ್ನು ಕಾಪಾಡುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಅದರಲ್ಲಿ ದೃಷ್ಟಿ ದೋಷ ನಿವಾರಣೆಯ ಕಾರ್ಯವು ಒಂದಾಗಿದ್ದು, ಈ ಕಾರ್ಯವನ್ನು ಪ್ರಸಾದ್ ನೇತ್ರಾಲಯ ಮಂಗಳೂರು ಇವರು ನಮ್ಮ ಸಂಸ್ಥೆಯಲ್ಲಿ ನಡೆಸಿರುವುದು ಶ್ಲಾಘನೀಯವಾಗಿದೆ” ಎಂದರು.

kannadaka2

ಈ ಸಂದರ್ಭ ೩೦೦ಕ್ಕೂ ಹೆಚ್ಚು ಮಂದಿಗೆ ಕನ್ನಡಕವನ್ನು ವಿತರಿಸಲಾಯಿತು. ಪ್ರಸಾದ್ ನೇತ್ರಾಲಯದ ಸಂಸ್ಥಾಪಕರಾದ ಡಾ. ಕೃಷ್ಣಪ್ರಸಾದ್ ಇವರನ್ನು ವಿದ್ಯಾಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು. ವಿದ್ಯಾಕೇಂದ್ರದ ಅಧ್ಯಕ್ಷರಾದ ಬಿ. ನಾರಾಯಣ ಸೋಮಯಾಜಿ ಹಾಗೂ ಪ್ರಸಾದ್ ನೇತ್ರಾಲಯದ ಪಿಆರ್‌ಒ ಮಧುಕರ್ ಮತ್ತು ಸಹಾಯಕರು ಉಪಸ್ಥಿತರಿದ್ದರು. ಕಳೆದ ಜನವರಿಯಲ್ಲಿ ೧೦ದಿನಗಳ ಕಾಲ ಉಚಿತ ನೇತ್ರ ತಪಾಸಣಾ ಶಿಬಿರವು ನಡೆದಿದ್ದು,ಈ ಸಂದರ್ಭದಲ್ಲಿ ಕನ್ನಡಕದ ಅವಶ್ಯಕತೆಯನ್ನು ತಿಳಿಸಿರುವವರಿಗೆ   ಉಚಿತವಾಗಿ ಕನ್ನಡಕವನ್ನು ವಿತರಿಸಲಾಯಿತು.
ಪದವಿ ವಿಭಾಗದ ಪ್ರಾಂಶುಪಾಲರಾದ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ವಂದಿಸಿದರು. ಪ್ರೌಢಶಾಲೆಯ ಕಲಾ ಶಿಕ್ಷಕರಾದ ಜಿನ್ನಪ್ಪ ಏಳ್ತಿಮಾರ್ ಕಾರ‍್ಯಕ್ರಮವನ್ನು ನಿರೂಪಿಸಿದರು.

By suddi9

Leave a Reply

Your email address will not be published. Required fields are marked *