ಕೈಕಂಬ:ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ವೈದ್ಯರು ಹಾಗೂ ಆಶಾ ಕಾರ್ಯಕರ್ತರು ಹಾಗೂ ಬಜ್ಪೆಯ ಪೊಲೀಸ್ ಇನ್ಸಪೆಕ್ಟರ್ ಅವರು ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿರುವುದನ್ನು ಅಭಿನಂದಿಸಿ ಸನ್ಮಾನಿಸುವ ಕಾರ್ಯಕ್ರಮ ಯುವಶಕ್ತಿ ಕಾಜಿಲ ಇದರ ನೇತೃತ್ವದಲ್ಲಿ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಭಾನುವಾರ ಕಾಜಿಲ ಕೋರ್ದಬ್ಬು ದೈವಸ್ಥಾನದ ವಠಾರದಲ್ಲಿ ನಡೆಯಿತು.
ತಿಲಕ್ ರಾಜ್ ಕೃಷ್ಣಾಪುರ ಮಂಡಲ ಅಧ್ಯಕ್ಷರು, ರಾಜೇಶ್ ಕೊಟ್ಟಾರಿ ಮಂಡಲ ಪ್ರಧಾನ ಕಾರ್ಯದರ್ಶಿ, ಗುರುಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸೋಹನ್ ಅತಿಕಾರಿ,ಕೇಶವ ಸಹರಾ ಸ್ಕೂಲ್ ಪ್ರಾಂಶುಪಾಲರು, ಹರೀಶ್ ಮಟ್ಟಿ ಜಾಗರಣ ವೇದಿಕೆ ಪ್ರಮುಖರು, ಉದ್ಯಮಿ ಚಂದ್ರಹಾಸ ಶೆಟ್ಟಿ ನಾರಳ .
ಗೀತಾ ಶೆಟ್ಟಿ ಅಧ್ಯಕ್ಷರು ಪ್ರಕೃತಿ ಮಹಿಳಾ ಸಂಘ, ಜಯಾನಂದ ನಾಯಕ್ ಸೊಸೈಟಿ ಅಧ್ಯಕ್ಷರು,ಕಾಜಿಲ ಕೊರ್ದಬ್ಬು ದೈವಸ್ಥಾನದ ಗೌರವಾಧ್ಯಕ್ಷರುಗಳಾದ ರಾಮ ಪೂಜಾರಿ ,ನೀಲಾಕ್ಷ ಕೋಟ್ಯಾನ್,ಮಾರಪ್ಪ ಶೆಟ್ಟಿ, ಗಂಗಾಧರ ಪೂಜಾರಿ, ದಯಾನಂದ ಪೂಜಾರಿ ಅಧ್ಯಕ್ಷರು ಕಾಜಿಲ ಕೊರ್ದಬ್ಬು ದೈವಸ್ಥಾನ, ಅಪ್ಪು ಸಂಚಾಲಕರು ಯುವ ಶಕ್ತಿ ಕಾಜಿಲ, ಅಜಯ್ ಕಾಜಿಲ ತುಳುವೆರೆ ಕೂಟ ಅಧ್ಯಕ್ಷರು,ಸುಂದರ ಮುಖಾರಿ ಅರ್ಚಕರು ಕಾಜಿಲ ಕೊರ್ದಬ್ಬು ದೈವಸ್ಥಾನ, ಹಾಗೂ ಸಂಘದ ಸದಸ್ಯರು, ಗ್ರಾಮಸ್ಥರು ಜೊತೆಗಿದ್ದರು.
