ಕೋಲಾರ: ಕೋಲಾರ ನಗರದ ಲಯನ್ಸ್ ಕ್ಲಬ್‍ನಲ್ಲಿ ಇತ್ತೀಚೆಗೆ ಕೋಲಾರ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂಘದ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಸತತವಾಗಿ 9ನೇ ಬಾರಿಗೆ ಅಧ್ಯಕ್ಷರಾಗಿ ಎನ್ ದೇವರಾಜ್ ಅಧಿಕ ಮತಗಳನ್ನು ಗಳಿಸಿ ಚುನಾಯಿತರಾಗಿದ್ದಾರೆ.ಉಪಾಧ್ಯಕ್ಷರಾಗಿ ಟಿ.ಎಂ ನಾರಾಯಣಸ್ವಾಮಿ, ಕಾರ್ಯದರ್ಶಿಯಾಗಿ ಎಸ್.ಕೆ ರವೀಂದ್ರ, ಖಜಾಂಚಿಯಾಗಿ ಕೆ.ಆರ್ ನರಸಿಂಹಮೂರ್ತಿ ಚುನಾಯಿತರಾಗಿದ್ದಾರೆ. ಒಟ್ಟು ಜಿಲ್ಲೆಯ 30 ಮಂದಿ ಮತ ಚಲಾಯಿಸಿದ್ದರು.ಇದಕ್ಕೂ ಮುನ್ನಾ ನಡೆದ ವಾರ್ಷಿಕ ಸಭೆಯಲ್ಲಿ ಎನ್.ದೇವರಾಜ್ ಪ್ರಾರ್ಥಿಸಿ, ನಾಗೆಗೇಂದ್ರ ಪ್ರಸಾದ್ ಸ್ವಾಗತಿಸಿ, ಲೆಕ್ಕ ಪರಿಶೋಧನಾ ವರದಿಯನ್ನು ಮಂಡಿಸಲಾಯಿತು. ಲೆಕ್ಕಪರಿಶೋಧನಾ ವರದಿಯನ್ನು ಅಂಗೀಕರಿಸಲಾಯಿತು.audito devaraj news (3)

ಚುನಾಯಿತ ಅಧ್ಯಕ್ಷರಾದ ಎನ್.ದೇವರಾಜ್ ಮಾತನಾಡಿ, ವಿಶ್ವಾಸವಿಟ್ಟು ಮತ ಚಲಾಯಿಸಿದ ಎಲ್ಲರಿಗೂ ವಂದನೆಗಳು ಅರ್ಪಿಸಿ ಜಿ.ಎಸ್.ಟಿಯಲ್ಲಿ ಆಗಿರುವ ಬದಲಾವಣೆಗಳನ್ನು ತಿಳಿಸಿಕೊಟ್ಟರು. ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರಿಯಾಶೀಲತೆಯಿಂದ ಸಂಘದ ಕಾರ್ಯಚಟುವಟಿಕೆಗಳು ನಡೆಸುವ ಭರವಸೆ ನೀಡಿದರು.ನಂತರ ಆಡಿಟಿಕ್ ಎಂಬ ಜಿ.ಎಸ್.ಟಿ ಹಾಗೂ ಅಕೌಂಟಿಗ್ ಸಾಪ್ಟ್‍ವೇರ್ ಉಪಯೋಗ ಹಾಗೂ ಬಳಕೆಯ ಬಗ್ಗೆ ಮಾಹಿತಿ ಕೊಡಲಾಯಿತು. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಸಕ್ರಿಯವಾಗಿ ಎಲ್ಲರೂ ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *