ಎಡಪದವು:ಮಹಾತ್ಮ ಗಾಂಧೀಜಿ ಯವರ ಜನ್ಮ ದಿನದ ಪ್ರಯುಕ್ತ ಗಾಂಧಿ ಜಯಂತಿ ಯನ್ನೂ,,ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜನ್ಮದಿನದ ಪ್ರಯುಕ್ತ ಶಾಸ್ತ್ರಿ ಜಯಂತಿ ಯನ್ನೂ ಎಡಪದವು ಐಡಿಯಲ್ ಆಂಗ್ಲ ಮಾಧ್ಯಮ ಶಾಲೆ ಯಲ್ಲಿ ಆಚರಿಸಲಾಯಿತು. ಸಮಾರಂಭವನ್ನು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು.
ಗಾಂಧಿಯವರು ತೋರಿದ ಸರ್ವ ಧರ್ಮ ಸಮಭಾವ ಪ್ರತೀಕವಾಗಿ ಮುಖ್ಯೋಪಾಧ್ಯಾಯಿನಿ ನಂದಾ ಗಡಿಯಾರ ರವರು ಹಾಗೂ ಸಹ ಮುಖ್ಯೋಪಾಧ್ಯಾಯಿನಿ ಸುಮತಿ ಯವರು ಭಗವದ್ಗೀತೆ ಯನ್ನೂ, ಯಾಸ್ಮೀನ್ ರವರು ಖುರಾನ್, ಪ್ಲಾಸ್ಸಿ ತಾವ್ರೊ ಮ್ಯಾನೇಜರ್ ಅವರು ಬೈಬಲ್ ಪಠಣ ಮಾಡುವುದರೊಂದಿಗೆ ಸರ್ವಧರ್ಮ ಪ್ರಾರ್ಥನೆಯನ್ನು ಮಾಡಿದರು.

ಕೊನೆಯಲ್ಲಿ ಎಲ್ಲಾ ಶಿಕ್ಷಕ ಶಿಕ್ಷಕಿಯರೂ, ಸಿಬ್ಬಂದಿ ವರ್ಗದವರೂ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿದರು. ನಮ್ಮ ದೇಶದ ಭಾವೈಕ್ಯತೆ ಕಾಪಾಡಲು ಎಲ್ಲರೂ ಪ್ರತಿಜ್ಞೆಯನ್ನು ಮನಸಾರೆ ಕೈಗೊಂಡರು. ಸಹ ಮುಖ್ಯೋಪಾಧ್ಯಾಯ ಫೆಲಿಕ್ಸ್ ಸಿಕ್ವೇರಾ ಧನ್ಯವಾದ ಸಮರ್ಪಿಸಿದರು.
