ಬಂಟ್ವಾಳ:ಅಮ್ಟಾಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಲೊರೆಟ್ಟೊ ಶಾಖೆಯ ಉದ್ಘಾಟನಾ ಕಾರ್ಯಕ್ರಮ ಅ. ೪ರಂದು ಬೆಳಗ್ಗೆ ೧೦.೩೦ಕ್ಕೆ ಲೊರೆಟ್ಟೊ ಸಂತ ಅಂತೋನಿ ಕಾಂಪ್ಲೆಕ್ಸ್ನಲ್ಲಿ ನಡೆಯಲಿದೆ.ನೂತನ ಶಾಖೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾÊಕ್ ಉಳಿಪ್ಪಾಡಿಗುತ್ತು ಅವರು ಉದ್ಘಾಟಿಸಲಿದ್ದು, ಭದ್ರತಾ ಕೋಶವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಉದ್ಘಾಟಿಸಲಿದ್ದಾರೆ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜರಾಮ್ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
ಅತಿಥಿಗಳಾಗಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್, ಸಹಕಾರ ಸಂಘಗಳ ಸಹಾಯ ನಿಬಂಧಕ ಸುಽÃರ್‌ಕುಮಾರ್, ಲೊರೆಟ್ಟೊ ಚರ್ಚ್ನ ಧರ್ಮಗುರು ವಂ|ಫಾ| ಫ್ರಾನ್ಸಿಸ್ ಕ್ರಾಸ್ತಾ, ಮಂಗಳೂರು ಸಹಕಾರ ಅಭಿವೃದ್ಧಿ ಅಽಕಾರಿ ತ್ರಿವೇಣಿ ರಾವ್, ಬಂಟ್ವಾಳ ಪುರಸಭಾ ಸದಸ್ಯ ವಾಸು ಪೂಜಾರಿ ಲೊರೆಟ್ಟೊ, ಉದ್ಯಮಿ ಅಹಮ್ಮದ್ ಬಾವಾ ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ, ಉಪಾಧ್ಯಕ್ಷ ಆಲ್ವಿನ್ ವಿನಯ್ ಲೋಬೊ ಹಾಗೂ ಮುಖ್ಯಕಾರ್ಯನಿರ್ವಹಣಾಽಕಾರಿ ಅಜಯ್‌ಕುಮಾರ್ ಅಜಿಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಂಘವು ಅಮ್ಟಾಡಿ, ತುಂಬೆ, ಕಳ್ಳಿಗೆ ಮತ್ತು ಕುರಿಯಾಳ ಗ್ರಾಮ ವ್ಯಾಪ್ತಿಯನ್ನು ಹೊಂದಿದ್ದು, ಒಟ್ಟು ೩೦೯೧ ಸದಸ್ಯರನ್ನು ಹೊಂದಿದೆ. ಎಲ್ಲಾ ಸದಸ್ಯರಿಗೆ ಅನುಕೂಲವಾಗುವಂತೆ ವಿವಿಧ ಠೇವಣಿ ಯೋಜನೆ ಜಾರಿಗೆ ತಂದಿದ್ದು, ಕೃಷಿ ಹಾಗೂ ಕೃಷಿಯೇತರ ಸಾಲಗಳನ್ನು ನೀಡಿ ೯೯.೫ ಶೇ. ವಸೂಲಾತಿ ದಾಖಲಿಸಿದೆ.ಸಂಘದಲ್ಲಿ ೧೭ ಕೋ.ರೂ.ಠೇವಣಿ ಇದ್ದು, ೧೪ ಕೋ.ರೂ.ಸಾಲ ನೀಡಿದೆ. ಸಂಘವು ತನ್ನ ಸ್ವಂತ ಬಂಡವಾಳದಿಂದಲೇ ಸಾಲವನ್ನು ನೀಡುತ್ತಿದೆ. ಲೆಕ್ಕಪರಿಶೋಧನೆಯಲ್ಲಿ ಸತತ ೮ ವರ್ಷಗಳಿಂದ ಎ ವರ್ಗೀಕರಣವನ್ನು ಪಡೆದಿದ್ದು, ವ್ಯವಹಾರ ಪಾರದರ್ಶಕವಾಗಿ ಸಂಪೂರ್ಣ ಗಣಕೀಕೃತವಾಗಿರುತ್ತದೆ. ಅಮ್ಟಾಡಿಯಲ್ಲಿ ಕೇಂದ್ರ ಕಚೇರಿಯ ಜತೆಗೆ ಶಾಖೆಯನ್ನು ಹೊಂದಿದ್ದು, ಕಳ್ಳಿಗೆಯಲ್ಲಿ ಶಾಖೆ ಇರುತ್ತದೆ. ಪ್ರಸ್ತುತ ಲೊರೆಟ್ಟೊದಲ್ಲಿ ನೂತನ ಶಾಖೆ ಆರಂಭಗೊಳ್ಳುತ್ತಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
