ಕೋಲಾರ:ತಾಲ್ಲೂಕಿನ ಅವುಲಕುಪ್ಪ ಗ್ರಾಮದ ವಾಸಿ ಹಾಗೂ ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಜಿ.ಶಂಕರ್ ಎಂಬುವವರ ಮೇಲೆ ಅದೇ ಗ್ರಾಮದ ಎನ್. ನಾರಾಯಣಸ್ವಾಮಿ ಕುಟುಂಬದ ಸರ್ವಸದಸ್ಯರು ಸೋಮವಾರ ರಾತ್ರಿ ಹಲ್ಲೆ ಮಾಡಿ ಪಾರಾರಿಯಾಗಿದ್ದು, ಗಾಯಾಳು ಸರ್ಕಾರಿ ಅಸ್ವತ್ರೆಯಲ್ಲಿ ದಾಖಲಾಗಿ ಪೋಲೀಸರು ಪ್ರಕರಣ ದಾಖಲಿಸಿ ಮುಂದಿ ಕ್ರಮಕೈಗೊಂಡಿರುತ್ತಾರೆ.IMG_20200930_083421

ಘಟನೆ ಹಿನ್ನಲೆ ವಿವರ.
ಜಿ.ಶಂಕರ್ ಮತ್ತು ಎನ್. ನಾರಾಯಣಸ್ವಾಮಿ ಒಂದೇ ಗ್ರಾಮದ ವಾಸಿಗಳಾಗಿದ್ದು, 2018 ರಲ್ಲಿ ಇವರಿಬ್ಬರ ಮಧ್ಯ ಕಾರಾಣಾಂತರದಿಂದ ಜಗಳವಾಗಿ ಪೋಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿರುತ್ತದೆ. ಈ ಹಳೆಯ ವೈಷಮ್ಯ ಕಾರಣದಿಂದ ಸೋಮವಾರ ರಾತ್ರಿ ಸುಮಾರು 8 ಗಂಟೆಯ ಸಮಯದಲ್ಲಿ ಪಟ್ಟಣದಿಂದ ಗ್ರಾಮಕ್ಕೆ ಹೋಗುತ್ತಿದ್ದ ವೇಳೆಯಲ್ಲಿ ಜಿ.ಶಂಕರ್ ಎಂಬುವವರನ್ನು ನಾರಾಯಣಸ್ವಾಮಿ ಕುಟುಂಬಸ್ಥರು ಮಾರ್ಗ ಮಧ್ಯೆ ಅಡ್ಡಗಟ್ಟಿ ರ್ಯಾಡ್‍ನಿಂದ ತಲೆಗೆ ಹೊಡೆದು ತೀವ್ರ ಪೆÀಟ್ಟಾಗಿ ರಕ್ತ ಸ್ರಾವದಿಂದ ಗ್ರಾಮಕ್ಕೆ ಓಡಿ ಬಂದಿರುತ್ತೇನೆ. ವಿಷಯ ತಿಳಿದ ಕೂಡಲೇ ಸಂಬಂದಿಕರ ಸಹಕಾರದಿಂದ ಪ್ರಾಣಾಪಾಯದಿಂದ ಪಾರಾಗಿ ಅಸ್ವತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಎಂದು ಗಾಯಾಳು ಶಂಕರ್ ತಿಳಿಸಿದರು.

ಇದರ ಬಗ್ಗೆ ಪೋಲೀಸ್ ಠಾಣೆಯಲ್ಲಿ ಶಂಕರ್ ದೂರಿನ ಮೇರೆಗೆ ಎನ್. ನಾರಾಯಣಸ್ವಾಮಿ ಎ-1, ಮಂಜುನಾಥರೆಡ್ಡಿ ಎ-2, ಭಾಗ್ಯಮ್ಮ, ಮಂಜೇಶ್, ಪ್ರಕಾಶ್, ಇವರ ಮೇಲೆ ಅಟ್ರಾಸಿಟಿ, 307 ಇತರೆ ಮೊಕ್ದಮೆಗಳು ಪೋಲೀಸರು ದೂರನ್ನು ದಾಖಲೆ ಮಾಡಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ. ಶಾಸಕ ಕೆ.ಆರ್. ರಮೇಶ್‍ಕುಮಾರ್ ಪೋಲಿಸ್ ಠಾಣೆ ಪ್ರವೇಶಶಾಸಕರು ಪಟ್ಟಣದ ಪುರಸಭೆ ವಾಣಿಜ್ಯ ಮಳಿಗೆಗಳ ಅವರಣ, ನೂತನ ಕಟ್ಟಡ ನಿರ್ಮಾಣದ ಪರಿಶೀಲನೆಯ ನಂತರ ಅವುಪಕುಪ್ಪ ಗ್ರಾಮದ ಎ-2 ಆರೋಪಿ ಮಂಜುನಾಥರೆಡ್ಡಿ ಅಪ್ತರಾಗಿದ್ದರಿಂದ ಶಾಸಕರಾದ 10 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಪೋಲೀಸ್ ಠಾಣೆಗೆ ಪ್ರವೇಶಮಾಡಿ ಡಿವೈಎಸ್‍ಪಿ ಮತ್ತು ಪೋಲೀಸ್ ಸಿಬ್ಬಂದಿ ಹಾಗೂ ಇವರೊಂದಿಗೆ ಸಮಾಲೋಚನ ನಡೆಸಿ ಅವುಲಕುಪ್ಪ ಗ್ರಾಮದ ದೂರದಾರರು ಹಾಗೂ ಪ್ರಕರಣದಲ್ಲಿ ದಾಖಲಾಗಿರುವ ಇವರೆಲ್ಲರೂ ನಮಗೆ ಬೇಕಾಗಿರುವುದರಿಂದ ನಾನು ಈ ವಿಷಯದಲ್ಲಿ ರಾಜಕೀಯ ಹಸ್ತಾಕ್ಷಪ ಮಾಡುವುದಿಲ್ಲ. ಕಾನೂನು ದೃಷ್ಟಿಯಲ್ಲಿ ಎಲ್ಲರೂ ಒಂದೇ ಕೊಲೆ ಯತ್ನದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾಗಿರುವುದು ಇಬ್ಬರು ತಪ್ಪಿಸ್ಥರೆ ಕಾನೂನಿಗೆ ನಾವೊಲ್ಲರು ಗೌರಕೊಡಬೇಕೆಂದು ಹೇಳಿ ಎ-2 ಮಂಜುನಾಥರೆಡ್ಡಿಯನ್ನು ವಿಚಾರಿಸಿ ಹೊರನೆಡೆದರು.ಸರ್ಕಾರಿ ಅಸ್ವತ್ರೆಯಲ್ಲಿ ದಾಖಲಾಗಿರುವ ಗಾಯಾಳು ಜಿ.ಶಂಕರ್, ಇತನನ್ನು ವಿಚಾರಿಸಿ ಕಾನೂನು ತನ್ನ ಕೆಲಸ ತಾನೂ ಮಾಡಿಕೊಂಡು ಹೋಗುತ್ತದೆ ಎಂದು ಹೇಳಿ ಧೈರ್ಯ ತುಂಬಿರುತ್ತಾರೆ.

ದಂಡೋರ ಮುಖಂಡರ ಸುದ್ದಿಗೋಷ್ಠಿ
ಅಂದ್ರಪ್ರದೇಶದ ಮಾದಿಗ ದಂಡೋರ ಅಧಿಕಾರ ಪ್ರತಿನಿಧಿ ನರೇಂದ್ರಬಾಬು ಮಾತನಾಡಿ ರಾಷ್ಟೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ರವರ ನಿರ್ದೇಶನದಂತೆ ಇಂದು ನಮ್ಮ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಶಂಕರ್‍ಗೆ ಆಗಿರುವ ಅನ್ಯಾಯವನ್ನು ವಿರೋಧಿಸಿ ನ್ಯಾಯಕ್ಕಾಗಿ ಪೋಲೀಸ್ ಠಾಣೆಗೆ ಬಂದಿದ್ದೇವೆ. ಅಮಾನೀಯವಾಗಿ ಹಲ್ಲೆ ಪ್ರಯತ್ನಮಾಡಿರುವುದು ಖಂಡನೀಯವಾಗಿದೆ. ಕೂಡಲೇ ಐದು ಮಂದಿ ಆರೋಪಿಗಳನ್ನು ಪೋಲೀಸರು ಬಂದಿಸಲೇ ಬೇಕು ನ್ಯಾಯ ಅನ್ಯಾಯದ ಪರವಾಗಿ ಶಾಸಕರು ಹಸ್ತಾಕ್ಷಪ ಮಾಡುವುದಿಲ್ಲವೆಂದು ಹೇಳಿದ್ದಾರೆ. ಇವರಿಗೆ ಅಭಿನಂದನೆಗಳು ಸಲ್ಲಿಸುತ್ತೇವೆ. ಪೋಲೀಸರು ಅರೋಪಿಗಳನ್ನು ಬಂದಿಸುವುದರಲ್ಲಿ ವಿಫಲರಾದರೆ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

ತಾಲ್ಲೂಕು ವಕ್ಕಲಿಗರ ಸಂಘ ಮತ್ತು ಪಟ್ಟಣದ ಅನೇಕ ಮುಖಂಡರು ಎ-2 ಮಂಜುನಾಥರೆಡ್ಡಿ ಪರವಾಗಿ ನಿಂತು ಮಂಜುನಾಥರೆಡ್ಡಿಗೆ ಮತ್ತು ರಾತ್ರಿ ನಡೆದ ಹಲ್ಲೆ ಪ್ರಕರಣಕ್ಕೆ ಯಾವುದೇ ಸಂಬಂದವಿಲ್ಲ ಗಾಯಾಳು ಜಿ.ಶಂಕರ್ ಉದ್ದೇಶ ಪೂರ್ವಕವಾಗಿ ಮಂಜುನಾಥರೆಡ್ಡಿ ಹೆಸರನ್ನು ದೂರಿನಲ್ಲಿ ನೀಡಿರುವುದು ಸತ್ಯಕ್ಕೆ ದೂರವಾಗಿದೆ. ಕೂಡಲೇ ಮಂಜುನಾಥರೆಡ್ಡಿಯನ್ನು ಠಾಣೆಯಿಂದ ಬಿಡುಗಡೆ ಮಾಡುವಂತೆ ಪೋಲೀಸರನ್ನು ಒತ್ತಾಯ ಮಾಡಿದ್ದಾರೆ.

By suddi9

Leave a Reply

Your email address will not be published. Required fields are marked *