ಬಂಟ್ವಾಳ:  ವಯಕ್ತಿಕ ವಿಚಾರದಲ್ಲಿ ಮಾಜಿ ಸಚಿವ ರಮಾನಾಥ ರೈ ಹಾಗೂ ಕಾಂಗ್ರೆಸ್ ಪಕ್ಷವನ್ನು ಅನಾವಶ್ಯಕವಾಗಿ ಎಳೆದು ತಂದಿರುವುದು ಖಂಡನೀಯವಾಗಿದ್ದು,ಈ ಕುರಿತಂತೆ ಅಪಮಾನಕರವಾದ ರೀತಿಯಲ್ಲಿ ನಿಂದಿಸಿದ್ದಲ್ಲದೆ ಭಾವಚಿತ್ರದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟವರ ವಿರುದ್ಧ ಕಾನೂನುಕ್ರಮ ಕೈಗೊಳ್ಳುವುದಾಗಿ ಬಿ.ಸಿ.ರೋಡಿನ ನೋಟರಿ ಪಬ್ಲಿಕ್ ನ್ಯಾಯವಾದಿ ಎಂ.ಚಂದ್ರಶೇಖರ ಪೂಜಾರಿ ತಿಳಿಸಿದ್ದಾರೆ.IMG-20200928-WA0084

ಸೋಮವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಂಟ್ವಾಳ ತಾ.ನ ಕರ್ಪೆಗ್ರಾಮದ ಮಾಲ್ಪೋಡಿ ನಿವಾಸಿ ಮೋಂಟ ಪೂಜಾರಿಯವರ ಮಗ ವಸಂತ ಎಂಬವರು ನನ್ನ ಹೆಸರು ವಸಂತ ಹಾಗೂ ಇಮ್ತಿಯಾಝ್ ಎಂದರೇ ನಾನೊಬ್ಬನೇ ಈ ಎರಡು ಹೆಸರು ನನ್ನದೇ ಎಂದು ದೃಢಪಡಿಸಿ ನನ್ನ ಸಮಕ್ಷಮ ಪ್ರಮಾಣಪತ್ರ ಮಾಡಿರುವುದು ನಿಜ ಎಂದರು.

ಇದಾದ ಎರಡುದಿನಗಳ ನಂತರ ಈ ವಿಚಾರದ ಬಗ್ಗೆ ಕೆಲ ಸಂಘಟನೆಯ ಪ್ರಮುಖರು,ಯುವಕರು ಆಕ್ಷೇಪಿಸಿ ವಾಟ್ಸ್ ಪ್ ಸಹಿತ ಸಾಮಾಜಿಕ ಜಾಲತಾಣದಲ್ಲಿ ತನ್ನ ಭಾವಚಿತ್ರದೊಂದಿಗೆ  ಮಾಜಿ ಸಚಿವ ರಮಾನಾಥ ರೈ ಹಾಗೂ ಕಾಂಗ್ರೆಸ್ ಪಕ್ಷವನ್ನು ಹಾಗೆಯೇ ಬಿಲ್ಲವ ಸಮಾಜವನ್ನು ಅನಗತ್ಯವಾಗಿ ಎಳೆದು ತಂದು ಮಾನಹಾನಿಕರ ರೀತಿಯ ಬರಹದ ಮೂಲಕ ಏಕವಚನದಲ್ಲಿ ನಿಂದಿಸಿ ವಾಟ್ಸ್ ಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಸಮಾಜಕ್ಕೆ ತಪ್ಪು ಸಂದೇಶ ರವಾನಿಸಲಾಗಿದೆ  ಎಂದು ಅಪಾದಿಸಿದರು.

ನನ್ನ ವಕೀಲವೃತ್ತಿಯಲ್ಲಿ ಮಾಡಿರುವ ಕೆಲಸಕ್ಕು ಪಕ್ಷ,ಮಾಜಿ ಸಚಿವರಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಈ ಪ್ರಮಾಣಪತ್ರವನ್ನು ಕಾನೂನು ಬದ್ದವಾಗಿಯೇ ಮಾಡಿದ್ದನೆ,ಮುಂದಿನ ದಿನಗಳಲ್ಲಿ ಈ ರೀತಿಯಾದ ಮಾನಹಾನಿಕರ ರೀತಿಯ ಬರಹವನ್ನು ರವಾನಿಸಿದರೆ ಅಂತವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ಶೆಟ್ಟಿ ತುಂಬೆ ಶ್ರೀಶೈಲ,ಲೋಕೇಶ್ ಪೂಜಾರಿ ಬಿಯಾಪಾದೆ,ಪ್ರಸಾದ್ ಕೋಟ್ಯಾನ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *