ಬಂಟ್ವಾಳ: ದ.ಕ. ಜಿಪಂ., ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ ಬಂಟ್ವಾಳ, ದ.ಕ. ಹಾಲು ಒಕ್ಕೂಟ ಮಂಗಳೂರು, ರಾಯಿ ಹಾಲು ಉತ್ಪಾದಕರ ಸಹಕಾರ ಸಂಘ, ರಾಯಿ ಗ್ರಾ.ಪಂ., ರಾಯಿ ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿ ಇದರ ಆಶ್ರಯದಲ್ಲಿ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಶಿಬಿರ ಸೋಮವಾರ ರಾಯಿ ಗ್ರಾ. ಪಂ. ಸಭಾಂಗಣದಲ್ಲಿ   ನಡೆಯಿತು.2809pkt1A..

ಜಿ.ಪಂ. ಸದಸ್ಯ ಎಂ.ತುಂಗಪ್ಪ ಬಂಗೇರ ಅವರು  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೈನುಗಾರಿಕೆಗೆ ಸಹಕಾರ ನೀಡುವ ಮೂಲಕ ಕೊರೊನಾ ಮಹಾಮಾರಿಯಿಂದ ಕಂಗೆಟ್ಟ ರೈತರಿಗೆ  ಕೆಎಂಎಫ್ ಚೈತನ್ಯ ಒದಗಿಸಿದೆ ಎಂದು ಹೇಳಿದರು. ಸರಕಾರ ಹೈನುಗಾರಿಕೆಗೆ ಹೆಚ್ಚಿನ ಸವಲತ್ತು ಒದಗಿಸುತ್ತಿದ್ದು, ಶ್ರಮ ಪಟ್ಟರೆ ಹೈನುಗಾರಿಕೆಯಿಂದ ಆರ್ಥಿಕ ಸುಧಾರಣೆ ಸಾಧ್ಯ ಎಂದ ಅವರು  ಸರಕಾರ ಗೋ ಹತ್ಯಾ ನಿಷೇಧ ಜಾರಿ ಮಾಡಲಿದ್ದು, ಉಗ್ರ ಕಾನೂನಿನ ಅನುಷ್ಠಾನವಾಗಲಿದೆ ಎಂದರು.2809pkt1(Revised)

ಮಂಗಳೂರು ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ಜಯರಾಜು ಎಸ್. ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇಂದ್ರ ಸರಕಾರದ ವತಿಯಿಂದ ಗೋವುಗಳ ಸಮಗ್ರ ಮಾಹಿತಿ ಹೊಂದಿರುವ ಚಿಪ್ ಅಳವಡಿಕೆಯ ರಾಸುಗಳಿಗೆ ಕಿವಿ ಓಲೆ  ಅಳವಡಿಕೆ ಕಾರ್ಯಕ್ರಮ ಶೀಘ್ರ ಅನುಷ್ಠಾನಗೊಳ್ಳಲಿದೆ ಎಂದರು.

ದ.ಕ. ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ. ನಿತ್ಯಾನಂದ ಭಕ್ತ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿ, ಹೆಣ್ಣು ಕರುಗಳು ದನಗಳಾಗಿ ಬೆಳವಣಿಗೆ ಹೊಂದಲು ಸಮರ್ಪಕವಾದ ಆಹಾರ ಪೋಷಣೆ ಅಗತ್ಯ ಎಂದರು. ರಾಯಿ ಹಾ.ಉ. ಸಂಘದ ಅಧ್ಯಕ್ಷ ಸುಂದರ ಭಂಡಾರಿ ಅವರು ಮಾತನಾಡಿ, ಸಾವಯವ ಕೃಷಿಗೆ ಹೈನುಗಾರಿಕೆ ಪೂರಕವಾಗಿದೆ. ಇಂತಹ ಶಿಬಿರಗಳು ಇತರರಿಗೂ ಪ್ರೇರಣೆಯಾಗಲಿ ಎಂದರು.

ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ರಾಯಿ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ದಯಾನಂದ ಸಫಲ್ಯ, ಪಶು ವೈದ್ಯಕೀಯ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಡಾ. ಅವಿನಾಶ್ ಭಟ್, ವಾಮದಪದವು ಪಶು ವೈದ್ಯಾ„ಕಾರಿ ಡಾ. ಅಶೋಕ್ ಶೆಟ್ಟಿ, ಕಲ್ಲಡ್ಕ ಸಹಾಯಕ ನಿರ್ದೇಶಕ ಡಾ. ಹರೀಶ್, ಅಡ್ಯನಡ್ಕ ಸಹಾಯಕ ನಿರ್ದೇಶಕ ಡಾ. ಪರಮೇಶ್ವರ ನಾೈಕ್, ಪಶು ವೈದ್ಯ ಪರೀಕ್ಷಕರಾದ ಎಲ್.ಜೆ.ಸುರೇಶ್, ಬಾಲಕೃಷ್ಣ ಕೆ., ರಾಯಿ ಪಶು ಚಿಕಿತ್ಸಾಲಯ ಸಹಾಯಕ ಕಾಂತಪ್ಪ  ಅವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕರು ಪ್ರದರ್ಶನದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಾಯಿ ಹಾ.ಉ.ಸಂಘದ ಕಾರ್ಯದರ್ಶಿ ಸದಾನಂದ ಗೌಡ ಬಹುಮಾನಿತರ ವಿವರ ನೀಡಿದರು.

ರಾಯಿ ಪಶು ವೈದ್ಯಾ„ಕಾರಿ ಡಾ. ಉಮೇಶ್ ಕಿರಣ್ ಸ್ವಾಗತಿಸಿದರು. ಹಾಲು ಒಕ್ಕೂಟ ವಿಸ್ತರಣಾ„ಕಾರಿ ಜಗದೀಶ್ ವಂದಿಸಿದರು. ಜಾನುವಾರು ಅಭಿವೃದ್ಧಿ ಅ„ಕಾರಿ ಶ್ರೀಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *