ಬಂಟ್ವಾಳ:ದೀನದಯಾಳ್ ಉಪಾಧ್ಯಾಯರು ರಾಷ್ಟ್ರೀಯ ಧ್ಯೇಯ ಧೋರಣೆಗಳ ಆಧಾರದಲ್ಲಿ ಭಾರತೀಯ ಜನಸಂಘ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದು, ಅವರು ರೂಪಿಸಿದ ಸಿದ್ಧಾಂತದ ಮೇಲೆ  ಭಾರತೀಯ ಜನತಾ ಪಾರ್ಟಿಯು ಕಾರ್ಯನಿರ್ವಹಿಸುವ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿಸುವ ಅವರ ಕನಸನ್ನು ಪ್ರಸಕ್ತ ಸಾಕಾರಗೊಳಿಸುತ್ತಿದೆ ಎಂದು  ಬಿಜೆಪಿ ಪ್ರಮುಖ ನಾರಾಯಣ ಭಂಡಾರಿ ಅವರು ಹೇಳಿದರು.IMG-20200928-WA0035

ಬಂಟ್ವಾಳ ತಾ.ನ  ಪಂಜಿಕಲ್ಲು ಅಮೈಯಲ್ಲಿ   ಭಾರತೀಯ ಜನತಾ ಪಕ್ಷದ ಸಂಗಬೆಟ್ಟು ಶಕ್ತಿಕೇಂದ್ರದ ಪಂಜಿಕಲ್ಲು ಪಂಚಾಯತ್ ವ್ಯಾಪ್ತಿಯ ಮೂರು ಗ್ರಾಮಗಳ ೫ ಬೂತ್ ಸಮಿತಿಗಳ ಗ್ರಾ.ಪಂ.ಚುನಾವಣಾ ಪೂರ್ವ ಸಿದ್ಧತೆಯ ಬಗ್ಗೆ ಪ್ರಮುಖರು ಹಾಗೂ ಹಿರಿಯ ಕಾರ್ಯಕರ್ತರ  ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಪಂಜಿಕಲ್ಲು ಪಂಚಾಯತ್ ವ್ಯಾಪ್ತಿಯ ಚುನಾವಣಾ ಪ್ರಭಾರಿ ರಮೇಶ್ ಕುಡುಮೇರ್ ರವರ ಉಪಸ್ಥಿತರಿದ್ದರು.IMG-20200928-WA0030

ಭಾಜಪ ಜಿಲ್ಲಾ ರೈತ ಮೋರ್ಚಾದ ಕಾರ್ಯದರ್ಶಿ ಸಂಜೀವ ಪೂಜಾರಿ ಪಿಲಿಂಗಾಲ್, ಬಂಟ್ವಾಳ ಬಿಜೆಪಿ ಕ್ಷೇತ್ರದ ಕೋಶಾಧಿಕಾರಿ ಪ್ರಕಾಶ್ ಅಂಚನ್,ಪಂಜಿಕಲ್ಲು ಪಂಚಾಯತ್ ಚುನಾವಣಾ ಸಹ ಪ್ರಭಾರಿ ಚಿದಾನಂದ ಕುಜ್ಲುಬೆಟ್ಟು ಅವರು  ಪಕ್ಷ ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು. ನಿಕಟಪೂರ್ವ ಪಂಚಾಯತ್ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಗೌಡ, ಬೂತ್ ಸಮಿತಿಯ ಅಧ್ಯಕ್ಷರುಗಳಾದ ಪ್ರವೀಣ್ ಅಮೈ,ಆನಂದ ಪೂಜಾರಿ ಕೇಲ್ದೋಡಿ, ಶಶಿಧರ ಕೈಲಾರು, ಅಶ್ವಿನ್ ದಡ್ಡಲಕಾಡು, ಅಶೋಕ್ ಕೋಡಿಬೆಟ್ಟು, ಕರುಣೇಂದ್ರ ಪೂಜಾರಿ ಹಾಗೂ ಪಂಜಿಕಲ್ಲು ಪಂಚಾಯತ್ ಮಾಜಿ ಅಧ್ಯಕ್ಷೆ ಹರಿಣಾಕ್ಷಿ ಹಾಗೂ ಕೆ.ಎನ್.ಶೇಖರ್ , ಕ್ಷೇತ್ರ ಹಿಂದುಳಿದ ವರ್ಗದ ಮೋರ್ಚಾದ ಕಾರ್ಯದರ್ಶಿ ಸಂತೋಷ್ , ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಸದಸ್ಯ ಜೋಕಿಂ ಮಿನೇಜಸ್ ಹಾಗೂ ಪಂಚಾಯತ್‌ನ ಮಾಜಿ ಸದಸ್ಯರುಗಳು, ಪಕ್ಷದ ಹಿರಿಯ, ಕಿರಿಯ ಕಾರ್ಯಕರ್ತರು ಹಾಜರಿದ್ದರು.
  ಪಂಡಿತ್  ದೀನದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತಲ್ಲದೆ  ಇತ್ತೀಚೆಗೆ ಅಗಲಿದ ಪಕ್ಷದ ಹಿರಿಯ ನಾಯಕರ ಸದ್ಗತಿಗಾಗಿ  ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

By suddi9

Leave a Reply

Your email address will not be published. Required fields are marked *