ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ  ಎಲ್ಲಾ ಬೂತ್ ಮಟ್ಟದಲ್ಲಿ ಬಿ.ಜೆ.ಪಿ.ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ಮತ್ತು ರಾಷ್ಟ್ರೀಯ ಚಿಂತನೆಯನ್ನು ಮನೆ ಮನೆಗೆ ಮುಟ್ಟಿಸುವ ಮೂಲಕ ಪ್ರತಿ ಬೂತ್ ಗಳನ್ನು ಬಿ.ಜೆ.ಪಿ.ಬೂತ್ ಗಳಾನ್ನಾಗಿ ಪರಿವರ್ತಿಸಬೇಕು ಎಂದು ಜಿಲ್ಲಾ ಬಿ.ಜೆ.ಪಿ.ಉಪಾಧ್ಯಕ್ಷ ,ರಾಜ್ಯ ಕಿಯೋನಿಕ್ಸ್ ನಿಗಮದ ಅಧ್ಯಕ್ಷ  ಹರಿಕೃಷ್ಣ ಬಂಟ್ವಾಳ್ ಕರೆ ನೀಡಿದರು.IMG-20200927-WA0068
ಸರಪಾಡಿ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ವಗ್ಗ ಶ್ರೀಶಾರದಾಂಭ ಭಜನಾ ಮಂದಿರದಲ್ಲಿ  ನಡೆದ ಮುಂಬರುವ ಗ್ರಾಮ ಪಂಚಾಯತ್ ಚುನಾವಣಾ ಪೂರ್ವ ಭಾವಿ ಸಭೆಯಲ್ಲಿ ಪ್ರಭಾರಿಯಾಗಿ  ಭಾಗವಹಿಸಿ ಅವರು ಮಾತನಾಡಿದರು.ಜಿಲ್ಲಾ ಬಿ.ಜೆ.ಪಿ.ಪ್ರದಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ  ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಭಾವಚಿತ್ರಕ್ಜೆ  ಪುಷ್ಪಾರ್ಚನೆಗೈದು  ಮಾತಾನಾಡಿ, ರಾಜ್ಯ ಸೇರಿದಂತೆ  ಇಡೀ ಭಾರತದಲ್ಲಿ ಬಿ.ಜೆ.ಪಿ.ಹೆಮ್ಮರವಾಗಿ ಬೆಳೆದು ನಿಂತು ಜಗತ್ತೀನ ಅತೀ ದೊಡ ರಾಜಕೀಯ ಪಕ್ಷ ವಾಗಿ 18 ಕೋಟಿ ಅಧಿಕ ಸದಸ್ಯರನ್ನು ಹೊಂದಲು  ಪಂಡಿತ್ ದೀನ್ ದಯಾಳ್ ಉಪಾಧ್ಯಾಯರವರು ಹಾಕಿ ಕೊಟ್ಟ ಮಾರ್ಗದರ್ಶನ ಮತ್ತು ಅವರ ಆದರ್ಶಗಳಿಂದ ಸಾದ್ಯವಾಗಿದೆ ಎಂದರು.
 ಬಂಟ್ವಾಳ ಮಂಡಲ ಬಿ.ಜೆ.ಪಿ.ಅಧ್ಯಕ್ಷ ದೇವಪ್ಪ ಪೂಜಾರಿ ಮಾತಾನಾಡಿ ಪಕ್ಷದಲ್ಲಿ ಶಿಸ್ತು, ನಿಷ್ಠೆಯಿಂದ ಇರುವವರಿಗೆ ಗೌರವ ನೀಡಲಾಗುತ್ತದೆ.  ಗ್ರಾಮಪಂಚಾಯಿತ್ ಚುನಾವಣಾ ಸಂದರ್ಭದಲ್ಲಿ  ಪಕ್ಷ ವತಿಯಿಂದ ಸ್ಪರ್ಧಾಳುಗಳಾಗಿದ್ದವರನ್ನು ಸೋಲಿಸುವ ಪ್ರಯತ್ನ ನಡೆಸಿದಲ್ಲಿ ಅಂತಹವರನ್ನು ಪಕ್ಷ ಸಹಿಸುವುದಿಲ್ಲ.ಈ ನಿಟ್ಟಿನಲ್ಲಿ ಭವಿಷ್ಯದಲ್ಲಿ ಕಠಿಣವಾದ ಕ್ರಮ ಜರುಗಿಸಲಾಗುವುದು ಎಂದರು. ಮಂಡಳದ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಮುಂಬರುವ ಪಂಚಾಯತ್ ಚುನಾವಣಾ ದೃಷ್ಟಿಯಿಂದ ಕಾರ್ಯಯೋಜನೆಯ ಮಾಹಿತಿ ನೀಡಿದರು.  ಮಂಡಲದ ಉಪಾದ್ಯಾಕ್ಷರಾದ ಚಿದಾನಂದ ರೈ ಸಭೆಯ ಅಧ್ಯಕ್ಷತೆ ವಹಿಸಿದ್ದರು.
 ಬಂಟ್ವಾಳ ವಿಧಾನ ಸಭಾ ಕ್ಸೇತ್ರ ಗ್ರಾಮ ಪಂಚಾಯತ್ ಚುನಾವಣಾ ಸಹ ಪ್ರಭಾರಿ ಪ್ರಭಾಕರ ಪ್ರಭು, ಬಂಟ್ವಾಳ ಕ್ಷೇತ್ರ ಮಾಧ್ಯಮ ಪ್ರಮುಖು  ರಂಜಿತ್ ಮೈರಾ, ಹಿರಿಯರಾದ ರಾಮಕೃಷ್ಣ ಮಯ್ಯ, ಪ್ರಮೋದ್ ಕುಮಾರ್ ರೈ ಕಾಡಬೆಟ್ಟು,ವ್ಯಾಪ್ತಿಯ  ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳು,ವಿವಿಧ ಗ್ರಾಮ ಪಂಚಾಯತ್ ಗಳ ಪ್ರಭಾರಿಗಳು, ಕಾರ್ಯಕರ್ತರು,ಭಾಗವಹಿಸಿದ್ದರು. ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಹರೀಶ್ ಪ್ರಭು ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.ಪ್ರಕಾಶ್ ವಂದಿಸಿದರು.

By suddi9

Leave a Reply

Your email address will not be published. Required fields are marked *