ಬಂಟ್ಚಾಳ: ಬಿ.ಸಿ.ರೋಡ್ ಸಮೀಪದ ಕೈಕಂಬದ ಪೊಳಲಿ ದ್ವಾರದ ಬಳಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ನೂತನವಾಗಿ ನಿರ್ಮಾಣಗೊಂಡ ರಿಕ್ಷಾ ನಿಲ್ದಾಣವನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ ಉಳಿಪ್ಪಾಡಿಯವರು ಸೋಮವಾರ ಲೋಕರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಶಾಸಕರು, ರಿಕ್ಷಾ ಚಾಲಕರು ಸೇವಾ ಮನೋಭಾವದಿಂದ ದುಡಿಯುತ್ತಿದ್ದು ತಮ್ಮ ನಿತ್ಯ ದುಡಿಮೆಯ ಜೊತೆ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಯಾವುದೇ ಸಮಯದಲ್ಲಿ ಜನಸಾಮಾನ್ಯರಿಗೆ ಸ್ಪಂದಿಸುವ ಮೂಲಕ ವಿಶ್ವಾಸ ಅರ್ಹರಾಗಿರುತ್ತಾರೆ ಎಂದರು. 
ಈ ಭಾಗದ ರಿಕ್ಷಾ ಚಾಲಕರು ಬಹುದಿನಗಳ ಬೇಡಿಕೆಯುಇದೀವ ಈಡೇರಿದ್ದು ಮುಂದಿನ ದಿನಗಳಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಲ್ಲಾ ರಿಕ್ಷಾ ನಿಲ್ದಾಣಗಳನ್ನು ಹಂತ,ಹಂತವಾಗಿ ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನಕಾರ್ಯದರ್ಶಿ ಡೊಂಬಯ್ಯ ಅರಳ, ಪ್ರಮುಖರಾದ ರಮನಾಥ ರಾಯಿ, ಪ್ರಕಾಶ್ ಅಂಚನ್, ಗಣೇಶ್ ದಾಸ್,ಮಹಾಬಲ ಶೆಟ್ಟಿ, ಸಂಜೀವ ಪೂಜಾರಿ ಪಿಲಿಂಗಾಲು, ಸೀತಾರಾಮ ಪೂಜಾರಿ, ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ಸುದರ್ಶನ್ ಬಜ, ಅಭಿಯಂತರರಾದ ಡೊಮಿನಿಕ್ ಡಿಮೇಲ್ಲೋ, ಅಶ್ವಥ ರಾವ್ ಬಾಳಿಕೆ, ಪ್ರಮೋದ್ ನೂಜಿಪ್ಪಾಡಿ, ರಿಕ್ಷಾ ಚಾಲಕ ಸಂಘದ ಅಧ್ಯಕ್ಷ ಚಿತ್ತರಂಜನ್ ಪೂಜಾರಿ, ಕಾರ್ಯದರ್ಶಿ ಇಸ್ಮಾಯಿಲ್, ಗುತ್ತಿಗೆದಾರರದ ಕಾರ್ತಿಕ್ ಬಲ್ಲಾಳ್, ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.
