ಕೈಕಂಬ : ಮಾಜಿ ಶಾಸಕ ಮೊೈದಿನ್ ಬಾವ ಹಾಗೂ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಂದ್ರ ಕಾಂಬ್ಳಿ ಶಿಫಾರಸಿನ ಮೇರೆಗೆ ಕಿಸಾನ್ ಕಾಂಗ್ರೆಸ್ನ ಗುರುಪುರ ಬ್ಲಾಕ್ ನೂತನ ಅಧ್ಯಕ್ಷರಾಗಿ ವಿನಯ ಕುಮಾರ್ ಶೆಟ್ಟಿ ಮಾಣಿಬೆಟ್ಟು(ಗುರುಪುರ) ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳಾಗಿ ಗಣೇಶ್ ಕುಲಾಲ್(ಪ್ರಧಾನ ಕಾರ್ಯದರ್ಶಿ), ಜೆಸಿಂತಾ ಡಿ’ಕುನ್ಹ(ಜಿಲ್ಲಾ ಉಪಾಧ್ಯಕ್ಷ) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸದಾಶಿವ ಶೆಟ್ಟಿ, ರವಿರಾಜ್ ರಾವ್, ಪದ್ಮನಾಭ ಬಲ್ಲಾಳ್, ರೋಹಿತ್ ಪೂಜಾರಿ, ಬಾಲಕೃಷ್ಣ ಟೈಲರ್, ಹರೀಶ್ ಕೆ ಪೆರ್ಮಂಕಿ, ಜೀವನ್ ಸಲ್ದಾನ, ಪಿ ಹನೀಫ್, ಯಶವಂತ ಶೆಟ್ಟಿ, ಉಮಾನಾಥ ಬೆಲ್ಚಡ, ಸದಾಶಿವ ಅಮೀನ್ ತಿರುವೈಲು, ಜಿತೇಂದ್ರ ಅಂಚನ್ ಪರಾರಿ ಮತ್ತಿತರರು ಆಯ್ಕೆಯಾಗಿದ್ದಾರೆ.
