ಮುಂಬಯಿ : ನವಿಮುಂಬಯಿ ನೆರೂಳ್ ನಿವಾಸಿ ಪತ್ರಕರ್ತ ಹಾಗೂ ನ್ಯಾಯವಾದಿ ಸುರೇಶ್ ಆಚಾರ್ಯ ಇವರು ಸೆ. 26 ರಂದು ಬೆಳಿಗ್ಗೆ ಹೃದಯಘಾತದಿಂದಾಗಿ ನಿಧನ ಹೊಂದಿದರು.
ಮೂಲತಃ ಮುದರಂಗಡಿ ಸಮೀಪದ ಪಿಲಾರಿನವರಾದ ಇವರು ಉದಯವಾಣಿಯ ಮುಂಬಯಿ ಆವೃತ್ತಿಯಲ್ಲಿ ಕೆಲವು ವರ್ಷ ಉಪಸಂಪಾದಕರಾಗಿ ದುಡಿದು ನಂತರ ನ್ಯಾಯವಾದಿ ವೃತ್ತಿ ಕೈಗೊಂಡಿದ್ದರು. ಮುಂಬಯಿಯ ಪ್ರಮುಖ ತುಳು – ಕನ್ನಡಿಗ ಹಲವಾರು ಸಾಧಕರನ್ನು ಇವರು ಪತ್ರಿಕೆಯ ಮೂಲಕ ಪರಿಚಯಿಸಿದ್ದರು. ಇವರ ಕೆಲವೊಂದು ಲೇಖನಗಳು ಬಾರಿ ಜನಪ್ರಿಯತೆಯನ್ನು ಗಳಿಸಿದ್ದವು .

ಇವರು ಪನ್ವೇಲ್ನ ಕಾಳೀಕಾಂಬ ವಿಶ್ವಕರ್ಮ ಸೇವಾ ಸಂಘದ ಸ್ಥಾಪಕ ಸದಸ್ಯರಾಗಿ ಪ್ರಸ್ತುತ ಗೌರವ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಇದರ ಆಡಳಿತದಲ್ಲಿರುವ ಕಾಳಿಕಾಂಬಾ ವಿನಾಯಕ ದೇವಸ್ಥಾನ ಪನ್ವೇಲ್ ಇದರ ಸೇವಾ ಕಾರ್ಯದಲ್ಲಿ ಕೂಡಾ ಸಕ್ರಿಯರಾಗಿದ್ದರು. ಮೃತರು ಪತ್ನಿ ಹಾಗೂ ಅಪಾರ ಬಂದು ಮಿತ್ರರುಗಳನ್ನು ಅಗಲಿದ್ದಾರೆ.
