ಬಂಟ್ವಾಳ: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರ ಸಭೆ ಅಧ್ಯಕ್ಷರಾದ ಶ್ರೀ ಬೇಬಿ ಕುಂದರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವ ಸಿದ್ಧತೆ ಹಾಗೂ ಪಕ್ಷದ ಚಟುವಟಿಕೆ ಬಗ್ಗೆ ಚರ್ಚಿಸಲಾಯಿತು.ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಬಿ ರಮಾನಾಥ ರೈಯವರ ಮಾರ್ಗದರ್ಶನದಂತೆ ಚುನಾವಣೆಗೆ ಸಜ್ಜು ಗೊಳ್ಳುವಂತೆ ನಿರ್ಣಯಿಸಲಾಯಿತು.

23538c62-c72e-4231-b877-9851d351301dಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷರಾದ ಸದಾನಂದ ಕುಲಾಲ್ ರ್ ರಾಯಿ, ಪರಿಶಿಷ್ಟ ಜಾತಿ ಸಮಿತಿ ಅಧ್ಯಕ್ಷರಾದ ಗಂಗಯ್ಯ ಬಿ ಎನ್, ಅಲ್ಪ ಸಂಖ್ಯಾತ ವರ್ಗದ ಅಧ್ಯಕ್ಷರಾದ ಮೊಹಮ್ಮದ್ ಸಂಗಬೆಟ್ಟು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಜಗದೀಶ್ ಕೊಯಿಲ, ಮಾಣಿಕ್ಯ ರಾಜ್ ಜೈನ್, ಪ್ರದಾನ ಕಾರ್ಯದರ್ಶಿ ಗಳಾದ ಮಹಾಬಲ ಬಂಗೇರ, ಗುರುಪ್ರಸಾದ್ ಶೆಟ್ಟಿ, ರವಿ ಪೂಜಾರಿ ಪಂಜೀಕಲ್ಲು, ವಿಶ್ವನಾಥ್ ಗೌಡ ಮಣಿ, ಉಮೇಶ್ ಕುಲಾಲ್ ನಾವೂರು, ರಿಚರ್ಡ್ ಮೇನೇಜಸ್ ಅಮ್ಟಾಡಿ, ಕೋಶಾಧಿಕಾರಿ ತಿಲಕ್ ಪೂಜಾರಿ ಸುದೇಖಾರ್, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ, ಯುವ ಕಾಂಗ್ರೆಸ್ ಅಧ್ಯಕ್ಷರು ಪ್ರಶಾಂತ್ ಕುಲಾಲ್, ಸುರೇಶ್ ಪೂಜಾರಿ ಪಂಜೀಕಲ್ಲು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *