ಬಂಟ್ವಾಳ:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಆರೋಗ್ಯ ಇಲಾಖೆ,ಪುರಸಭೆ ಬಂಟ್ವಾಳ,ಅಂಗನವಾಡಿ ಕೇಂದ್ರ ಬಿ ಕಸಬ ವಲಯ, ಬಾಲ ವಿಕಾಸ ಸಮಿತಿ ಹೊಸ್ಮಾರು, ಸಂಯುಕ್ತ ಆಶ್ರಯದಲ್ಲಿ ಪೋಷಣೆ ಮಾಸಾಚರಣೆ, ಕಿಶೋರಿಯರಿಗೆ ಪೌಷ್ಟಿಕ ಆಹಾರದ ಚಿತ್ರ ಬಿಡಿಸುವ ಸ್ಪರ್ಧೆ, ಬೀಳ್ಕೊಡುಗೆ ಸಮಾರಂಭ ವನ್ನು ಬಂಟ್ವಾಳ ಬೈಪಾಸ್ ಸಮಾಜ ಸೇವಾ ಸಹಕಾರಿ ಬ್ಯಾಂಕಿನ ಸಭಾಭವನದಲ್ಲಿ ಏರ್ಪಡಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೋಜ ಕುಲಾಲ್ ಜನರಲ್ ಮ್ಯಾನೇಜರ್ ಸಮಾಜ ಸೇವಾ ಸಹಕಾರಿ ಬ್ಯಾಂಕ್ ಬಂಟ್ವಾಳ ವಹಿಸಿದ್ದರು. ಉದ್ಘಾಟನೆಯನ್ನು ಜಿಲ್ಲಾ ಉಪನಿರ್ದೇಶಕರಾದ ಶಾಮಲಾ ಸಿ. ಕೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ರವೀಂದ್ರ ಕಂಬಳಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಪುರಸಭಾ ಜನಪ್ರತಿನಿಧಿ ದೇವಕಿ, ಬಾಲ ವಿಕಾಸ ಸಮಿತಿ ಸದಸ್ಯರಾದ ಉಮೇಶ್ ಆಚಾರ್ಯ, ಹಿರಿಯ ಮೇಲ್ವಿಚಾರಕಿ ಶಾಲಿನಿ ,ಸಂಪನ್ಮೂಲ ವ್ಯಕ್ತಿಯಾಗಿ ಗೀತಾ ಸಾಂತ್ವನ ಕೇಂದ್ರ ಬಂಟ್ವಾಳ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇಂದಿನ ಈ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಪೌಷ್ಟಿಕ ಆಹಾರ ಪ್ರಾತ್ಯಕ್ಷತೆ, ಹಾಗೂ ಪೌಷ್ಟಿಕ ಆಹಾರದ ಕುರಿತಾದ ಮಾಹಿತಿ ಕಾರ್ಯಕ್ರಮ, ಸಾಂತ್ವನ ಕೇಂದ್ರದ ಬಗ್ಗೆ ಸ್ಥೂಲ ಪರಿಚಯ, ಹಾಗೋ ಕಿಶೋರಿಯರಿಗೆ ಚಿತ್ರ ಬಿಡಿಸುವ ಸ್ಪರ್ಧೆ, ಹಾಗೂ ಹೊಸ್ಮಾರು ನಿರ್ವೃತಿ ಹೊಂದಿದ ಅಂಗನವಾಡಿ ಸಹಾಯಕಿ ಯಮುನಾ ಇವರಿಗೆ ಬೀಳ್ಕೊಡುಗೆ ಸಮಾರಂಭ, ಹಾಗೂ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ, ಹಾಗೂ ಪೋಷಣೆ ಮಾಸಾಚರಣೆ ವಿವಿಧ ಪೋಸ್ಟರುಗಳನ್ನು ಪ್ರದರ್ಶಿಸಿ ಛಾಯಾಚಿತ್ರ ತೆಗೆಯುವಿಕೆ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮವನ್ನು ವಿಜಯವಾಣಿ ಶೆಟ್ಟಿ ನಿರೂಪಿಸಿದರು . ಮೋಹಿನಿ ಸ್ವಾಗತಿಸಿ ,ಭಾರತಿ ಕುದನೆ ಗುಡ್ಡೆ ಧನ್ಯವಾದವಿತ್ತರು . ಇಂದಿನ ಈ ಕಾರ್ಯಕ್ರಮದಲ್ಲಿ, ಮಕ್ಕಳ ತಾಯಂದಿರು ಕಿಶೋರಿಯರು,ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಮಹಿಳೆಯರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
