ಬಂಟ್ವಾಳ : ಧ್ವನಿ ಬೆಳಕು ಸಂಯೋಜಕರ ಒಕ್ಕೂಟ  ಬಂಟ್ವಾಳ ತಾಲೂಕು ಇದರ ಮಹಾಸಭೆ  ಬಿ.ಸಿ ರೋಡ್‌ನ ಲಯನ್ಸ್ ಸೇವಾ ಭವನದಲ್ಲಿ ಒಕ್ಕೂಟದ ಅಧ್ಯಕ್ಷ ಶೇಖ್ ಸುಬಾನ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.  ದೀಪಾಲಾಂಕಾರ ಮಾಲಕ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ರಾಜಶೇಖರ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗ ವಹಿಸಿದ್ದರು .  ಸಂತೋಷ್ ಕನ್ಯಾನ ಸ್ವಾಗತಿಸಿದರು ಕಾರ್ಯದರ್ಶಿ ಇಸ್ಮಾಯಿಲ್ ಬನಾರಿಯವರು ವರದಿ ವಾಚಿಸಿದರು ಕೋಶಾಧಿಕಾರಿ ಸಂತೋಷ್ ಕನ್ಯಾನ ಲೆಕ್ಕ ಪತ್ರ ಮಂಡಿಸಿದರು. 9YA padadikarigalu

ಇದೇ ವೇಳೆ ೨೦೨೦ – ೨೦೨೧ ನೇ ಸಾಲಿನ ಅಧ್ಯಕ್ಷರಾಗಿ ಶೇಖ್ ಸುಭಾನ್, ಉಪಾಧ್ಯಕ್ಷರಾಗಿ ಮಹಮ್ಮದ್ ತಾಹಿರಾ, ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಬನಾರಿ, ಜೊತೆ ಕಾರ್ಯದರ್ಶಿಯಾಗಿ ಲಿಂಗಪ್ಪ ಡಿ.ಜೆ, ಉದಯ ಬಂಟ್ವಾಳ, ಕೋಶಾಧಿಕಾರಿಯಾಗಿ ಸಂತೋಷ್ ಕನ್ಯಾನ, ಗೌರವ ಸಲಹೆಗಾರರಾಗಿ ರಾಜಶೇಖರ ಶೆಟ್ಟಿ, ಧನ್ ರಾಜ್ ಸಾಯಿಜನರೇಟರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಶಾಂತ್ ಕುಂಡಡ್ಕ, ವಸಂತ ಮಾಣಿ, ನಾರಾಯಣ ಕುಕ್ಕಾಜೆ, ಜಯಪ್ರಕಾಶ್, ಪ್ರಶಾಂತ್ ಅಜಿಲಮೊಗರು, ದಿವ್ಯರಾಜ್ ಹರೀಶ್, ಸಂತೋಷ್ ಸುವರ್ಣ ಕುರಿಯಾಳ, ಜಯಕ್ರಷ್ಣ ಕನ್ಯಾನ, ಸಂಘಟನ ಕಾರ್ಯದರ್ಶಿಗಳಾಗಿ ಸತೀಶ್ ವಗ್ಗ, ಗಂಗಾಧರ ಮಂಚಿ ಹಾಗೂ ಕುಶಲ್ ರಾಜ್ ಪಾಣೆಮಂಗಳೂರು ಆಯ್ಕೆಯಾದರು. ಕಾರ್ಯದರ್ಶಿ ಇಸ್ಮಾಯಿಲ್ ಬನಾರಿಯವರು ವಂದಿಸಿದರು.

By suddi9

Leave a Reply

Your email address will not be published. Required fields are marked *