ಬಂಟ್ವಾಳ: ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಣಿನಾಲ್ಕೂರು ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವಭಾವಿ ತಯಾರಿ ಸಭೆಯು ಸೆ. 2ರಂದು ಡೆನ್ನಿಸ್ಸ್ ಮಾವಿನಕಟ್ಟೆ ಅವರ ವಠಾರದಲ್ಲಿ ಬಿ .ರಮಾನಾಥ ರೈಯವರ ನೇತೃತ್ವದಲ್ಲಿ ನೆಡೆಯಿತು. ಪಂಚಾಯತ್ ಚುನಾವಣೆಯನ್ನು ಹಿರಿಯರ ಮಾರ್ಗದರ್ಶನದಂತೆ ಹಾಗೂ ಯುವಕರ ನೇತೃತ್ವದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮುಖಾಂತರ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿತಾವೆಲ್ಲರೂ ಒಗ್ಗಟಾಗಿ ಶ್ರಮಿಸೋಣ ಎಂದರು.IMG-20200903-WA0054 (1)

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಆಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಚುನಾವಣೆ ಸಲಹಾ ಸಮಿತಿ ಸದಸ್ಯರಾದ ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಜಗದೀಶ್ ಕೊಯಿಲ, ಜನಾರ್ದನ ಚೆಂಡ್ತಿಮಾರ್, ಸಂಪತ್ ಕುಮಾರ್ ಶೆಟ್ಟಿ, ಮೊಹಮ್ಮದ್ ಸಂಗಬೆಟ್ಟು, ಎಪ್ರೀಯಂ ಸಿಕ್ವೇರಾ ಹಾಗೂ ವಲಯ ಕಾಂಗ್ರೆಸ್ ಅಧ್ಯಕ್ಷ ಆದಂ ಕುಂಞ್ಞ , ಮುಖಂಡರಾದ ಶಿವಪ್ಪ ಪೂಜಾರಿ ಅಟ್ಟದಡ್ಕ, ಫಾರೂಕು ಬಡಗೊಟ್ಟು, ಕಾಂಚಲಾಕ್ಷಿ ತಿಂಗಳಾಡಿ, ಪ್ರೆಸ್ಸಿಲಾ ವಾಸ್, ನಿಕಿಲ್ ಶೆಟ್ಟಿ, ನವೀನ್ ಕೊಡಂಗೆ, ಬಾಲಕೃಷ್ಣ ಕೊಡಂಗೆ, ಹಸನಬ್ಬ ಮಿಯಾರ್, ಯೋಗಿಶ್ ಶೆಟ್ಟಿ ಆರುಮುಡಿ, ವಿಶ್ವನಾಥ ಪೂಜಾರಿ ನೇಲ್ಯಪಲ್ಕೆ, ಸಾಧಿಕ್ ಮಾವಿನ ಕಟ್ಟೆ, ಪೂವಪ್ಪ ಪೂಜಾರಿ, ಯಾದವ ಶೆಟ್ಟಿ ಅಂಡೀರು, ಜಯಂತಿ ಪೂಜಾರಿ ಕುಂಟೊನಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *