ಬಂಟ್ವಾಳ: ಸಜೀಪನಡುಗ್ರಾಮದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಗಳು ಪ್ರಗತಿಯಲ್ಲಿದ್ದು,ದೇವಾಲಯದ ಸುತ್ತು ಪೌಳಿಯ ಕಲ್ಲಿನ ಕೆಲಸಕ್ಕೆ ಚಾಲನೆ ನೀಡಲಾಯಿತು.
ನೂತನ ಸುತ್ತುಪೌಳಿಯನ್ನು ಕೆಂಪುಕಲ್ಲಿನಿಂದ ನಿರ್ಮಿಸಲು ಯೋಚಿಸಲಾಗಿದ್ದು, ಮುರಕಲ್ಲಿನ ಶಿಲ್ಪಿಗೆ ಕೆತ್ತನೆ ಕೆಲಸ ಆರಂಭಿಸಲು ಸಜಿಪ ಮಾಗಣೆ ತಂತ್ರಿ ಎo ಸುಬ್ರಮಣ್ಯ ಭಟ್ ಅವರ ನೇತೃತ್ವದಲ್ಲಿ ಧಾರ್ಮಿ ಕ ವಿಧಿವಿಧಾನಗಳು ನಡೆದ ಬಳಿಕ ದೇವರ ಪ್ರಸಾದವನ್ನು ನೀಡಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮುಳ್ಳುಂಜ ವೆಂಕಟೇಶ್ವರ ಭಟ್, ಕೆ ರಾಧಾಕೃಷ್ಣ ಆಳ್ವ, ಯಶವಂತ ದೇರಾಜೆ ಪ್ರದೀಪ್ ಶೆಟ್ಟಿ, ಅರ್ಚಕ ಗಣಪತಿ ಭಟ್ ಉಪಸ್ಥಿತರಿದ್ದರು
