ಬಂಟ್ವಾಳ: ತಾಲೂಕಿನ ಕಾರುಣಿಕದ ಕ್ಷೇತ್ರವಾದ ಶ್ರೀಪಣೋಲಿಬೈಲು ಕಲ್ಲುರ್ಟಿ ,ಕಲ್ಕುಡ ದೈವಸ್ಥಾನದಲ್ಲಿ ಶುಕ್ರವಾರದಿಂದ( ಸೆ.4) ಹರಕೆಯ ಕೋಲ ಸೇವೆ ಆರಂಭವಾಗಲಿದೆ.ಕೊರೋನಾ ಮಹಾಮಾರಿಯ ಹಿನ್ನಲೆಯಲ್ಲಿ ಸರಕಾರದ ಸುತ್ತೋಲೆಯಂತೆ ಕ್ಷೇತ್ರದಲ್ಲಿ ನಡೆಯುತ್ತಿದ್ದ ಹರಕೆಯ ಕೋಲ ಹಾಗೂ ಅಗೇಲುಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.ಇದೀಗ ಸರಕಾರದ ಸೂಚನೆಯನ್ವಯ ಶ್ರೀಕ್ಷೇತ್ರದಲ್ಲಿ ಹರಕೆಯ ಕೋಲ ಸೇವೆಗೆ ಮಾತ್ರ ಅವಕಾಶವಿದ್ದು,ಅಗೇಲು ಸೇವೆ ಮಾತ್ತ ಇರುವುದಿಲ್ಲ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.
