ಬಂಟ್ವಾಳ : ಬಂಟ್ವಾಳ ತಾ. ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆ ಶ್ರೀ ಗುರು ಫ್ರೆಂಡ್ಸ್ ಇದರ ನೂತನ ಪದಾ„ಕಾರಿಗಳ ಪದಗ್ರಹಣ ಮತ್ತು ಆಯುಷ್ಮಾನ್ ಆರೋಗ್ಯ ವಿಮೆ ಹಾಗೂ ಸರಕಾರದ ಇತರ ಯೋಜನೆಗಳ ಮಾಹಿತಿ, ನೋಂದಾವಣೆ ಕಾರ್ಯಕ್ರಮ ಮಾವಿನಕಟ್ಟೆ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ವಠಾರದಲ್ಲಿ ಆ.30ರಂದು ಜರಗಿತು.
ನ್ಯಾಯವಾದಿ ರಾಜೇಶ್ ಬೊಳ್ಳುಕಲ್ಲು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಘದ ಸ್ಥಾಪಕಾಧ್ಯಕ್ಷ ಶಶಿಧರ ಪೂಜಾರಿ ಮಾವಿನಕಟ್ಟೆ ಅವರು ಅಧ್ಯಕ್ಷ ತೆ ವಹಿಸಿದ್ದರು. ಮಾಜಿ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು ನೂತನ ಪದಾ„ಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ನೂತನ ಅಧ್ಯಕ್ಷ ನವೀನ್ ಶಾಂತಿ ಕೋಕಲ ಅವರು ಸಂಘದ ವರದಿ ಹಾಗೂ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಂಘದ ಮಾಜಿ ಅಧ್ಯಕ್ಷ ಆನಂದ ಶೆಟ್ಟಿ ಬಾಚಕೆರೆ, ಸಂಘದ ಸೇವಾಸಿಂಧು ಮುಖ್ಯಸ್ಥ ರಮೇಶ್, ಸಂಘದ ಗೌರವ ಸಲಹೆಗಾರರಾದ ಸಾಯಿಶಾಂತಿ ಕೋಕಲ, ಶ್ರೀಧರ ಪೂಜಾರಿ ನೈಬೇಲು ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿ ಅವರು ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ನಿರಂಜನ ಬಾಚಕೆರೆ ಸ್ವಾಗತಿಸಿದರು. ಉಪಾಧ್ಯಕ್ಷ ಶಿವಪ್ರಸಾದ್ ಶಾಂತಿ ಪ್ರಸ್ತಾವಿಸಿದರು. ಕಾರ್ಯದರ್ಶಿ ರಕ್ಷಿತ್ ಕುಲಾಲ್ ಎರ್ಮಾಳ ವಂದಿಸಿದರು. ಗುರುರಾಜ್ ಕುಂಟೋನಿ ಕಾರ್ಯಕ್ರಮ ನಿರೂಪಿಸಿದರು.
